ಕೊಬ್ಬರಿ ಕೊಟ್ಟು ಕೊರೊನಾ ಹೊತ್ತು ತಂದ ಚಾಲಕ
ತಿಪಟೂರು :
ಕಿಲ್ಲರ್ ಕೊರೊನಾ ಮಹಾಮಾರಿಯ ನಗರದಲ್ಲಿ ತನ್ನ ಖಾತೆಯನ್ನು ತೆರೆದಿದ್ದು ಇದರಿಂದಾಗಿ ನಗರದಲ್ಲಿ ಸಂಚಲನ ಮೂಡಿ ಚಾಮುಂಡೇಶ್ವರಿ ಬಡಾವಣೆಯನ್ನು ತಾಲ್ಲೂಕು ಆಡಳಿತ ಸೀಲ್‍ಡೌನ್ ಮಾಡಿದೆ.
ಮೊನ್ನೆತಾನೆ ನಮ್ಮ ಪತ್ರಿಕೆಯಲ್ಲಿ ಕೊರೊನಾವನ್ನು ಆಹ್ವಾನಿಸುತ್ತಿರುವ ಎ.ಪಿ.ಎಂ.ಸಿ ಎಂಬ ಅಡಿಬರದಲ್ಲಿ ಮೂಡಿದ ಲೇಖನದ ಬೆನ್ನಹಿಂದೆಯೇ ಎ.ಪಿ.ಎಂ.ಸಿ. ಇಂದ ಮಹಾರಾಷ್ಟ್ರದ ನಾಂದೆಂಡ್‍ಗೆ ಕೊಬ್ಬರಿಯನ್ನು ತೆಗೆದುಕೊಂಡು ಹೋಗಿದ್ದ ನಗರದ ಚಾಮುಂಡೇಶ್ವರಿ ಬಡಾವಣೆಯ ಲಾರಿ ಚಾಲಕನಿಗೆ ಇಂದು ಕೊರೊನಾ ಧೃಡಪಟ್ಟಿದ್ದು ಅಧಿಕೃತವಾಗಿ ತಿಪಟೂರು ನಗರಕ್ಕೆ ಕೊರೊನಾ ಆಗಮಿಸಿದೆ.
ಹೆಚ್ಚಿದ ಆತಂಕ :
ಇನ್ನು ಮಾರುಕಟ್ಟೆಯಿಂದ ಕೊಬ್ಬರಿ ತೆಗೆದುಕೊಂಡು ಹೋಗಲು ಷರತ್ತುವಿದಿಸಿದ್ದ ಎ.ಪಿ.ಎಂ.ಸಿ ಅವರು ಬಂದ ತಕ್ಷಣ ಕ್ವಾರಂಟೈನ್ ಮಾಡಿದ್ದು ಸರಿ. ಆದರೆ ಹೊರಗೆ ಹೋದ ಚಾಲಕರು ಅಲ್ಲಿ ಏನುಮಾಡಿ ಬರುತ್ತಿದ್ದರು ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಇನ್ನು ಮಹಾರಾಷ್ಟ್ರವೂ ಕೊರನಾದಲ್ಲಿಯೇ ಮುಳುಗಿದ್ದು ಅಲ್ಲಿ ಕಾಫಿ, ತಿಂಡಿಗೆ ಇಳಿದ ಲಾರಿಚಾಲಕರು ಮತ್ತು ಕ್ಲೀನರ್‍ಗಳಿಗೆ ಮುಕ್ತವಾಗಿ ಕೊರೊನಾ ಹಬ್ಬಿರುವ ಸಾಧ್ಯತೆ ಇದೆ.
ಚಾಲಕರ ಹೊಟೆಪಾಡಿಗಾಗಿಯೋ? ಇಲ್ಲ ರವಾನೆದಾರರ ಲಾಭಕ್ಕೆ ಬಲಿಯಾದರೆ? : ಇನ್ನು ತಿಪಟೂರು ಎ.ಪಿ.ಎಂ.ಸಿ ಇಂದ ಕೊಬ್ಬರಿ ಹೆಚ್ಚಾಗಿ ಹೋಗುತ್ತಿದ್ದುದೇ ಮಹಾರಾಷ್ಟ್ರಕ್ಕೆ ಇಲ್ಲಿ ಕೊರೊನಾ ತಾಂಡವವಾಡುತ್ತಿದ್ದರು ರೈತರ ಹಿತದೃಷ್ಟಿಯಿಂದ ಕೊಬ್ಬರಿ ಮಾರುಕಟ್ಟೆಯನ್ನು ತೆರೆದರು ಕೊಬ್ಬರಿಯನ್ನು ರವಾನಿಸಲು ಪ್ರಾರಂಭಿಸಿದರು. ಕೊರೊನಾ ಲಾಕ್‍ಡೌನ್‍ನಿಂದ ತೀವೃಸಂಕಷ್ಟಕ್ಕೆ ಗುರಿಯಾಗಿದ್ದ ಚಾಲಕರು ಮಾರುಕಟ್ಟೆ ಆರಂಭವಾದ ತಕ್ಷಣ ಹೊಟ್ಟೆಪಾಡಿಗಾಗಿ ಹೊರಟು ಈಗ ರೋಗನವನ್ನು ಮೇಲೆಳೆದುಕೊಂಡಿದ್ದಾರೆ ಈಗ ಚಾಲಕನ ಪೋಷಣೆ ಯಾರದ್ದು ಇದಕ್ಕೆ ರವಾನೆದಾರರು ಏನಾದರು ಕ್ರಮತೆಗೆದುಕೊಳ್ಳುತ್ತಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಕೊರೊನಾ ಪಾಸಿಟಿವ್ ಕೇಸ್ ನಗರದಲ್ಲಿ ಕಂಡು ಬಂದರು ಒಂದು ದಿನ ದಿನಸಿ, ತರಕಾರಿ, ಮಾಂಸವನ್ನು ಬಿಟ್ಟಿರುವುದು ಕಷ್ಟವೆಂದು ತಿಳಿದ ನಾಗರೀಕರು ಬೆಳಗ್ಗೆಯೇ ಮಾರುಕಟ್ಟೆ ಮತ್ತು ಮಾಂಸದ ಅಂಗಡಿಗಳ ಮುಂದೆ ಜಮಾಯಿಸಿದ್ದರು. ಸೂರ್ಯ ನೆತ್ತಿಯ ಮೇಲೆ ಬರುಬರುತ್ತಾ ಜನರು ರಸ್ತೆಗೆ ಇಳಿಯದೇ ಬಾಗಶಃ ಇಂದಿನ ಲಾಕ್‍ಡೌನ್ ಅನ್ನು ಯಶಸ್ವಿಗೊಳಿಸಿದರು.
ಇನ್ನು ಚಾಮುಂಡೇಶ್ವರಿ ಬಡಾವಣೆಯನ್ನು ಸೀಲ್‍ಡೌನ್ ಮಾಡಿದ ಸಂದರ್ಭದಲ್ಲಿ ಉಪವಿಭಾದಿಕಾರಿ, ನಗರಸಭೆ ಆಯುಕ್ತ ಮತ್ತು ಸಿಬ್ಬಂದಿ, ನಗರ ಠಾಣೆಯ ಸಿ.ಪಿ.ಐ ಮತು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾ ಹೂಡಿ ಔಷದಿಯನ್ನು ಸಿಂಪಡಿಸಿ ಜನರಿಗೆ ಸೂಚನೆ ಮತ್ತು ಎಚ್ಚರಿಕೆಯನ್ನು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








