ತುಮಕೂರು :
ಶೇ.80ರಷ್ಟು ಕೋವಿಡ್ ಮರಣಗಳು ತಡವಾದ ಪರೀಕ್ಷೆ, ತಪಾಸಣೆಯಿಂದಲೇ ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸೂಚಿತ ಲಕ್ಷಣಗಳಿರಲಿ, ಇಲ್ಲದಿರಲಿ ಆರೋಗ್ಯದಲ್ಲಿ ಅಸಹಜತೆ ಕಂಡುಬಂದಲ್ಲಿ ನಿರ್ಭೀತಿಯಿಂದ ಬಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಸಲಹೆ ನೀಡಿದರು.
ಸಮುದಾಯ ಮಟ್ಟಕ್ಕೆ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಕಾಲಿಕ ತಪಾಸಣೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದೊಂದೇ ಕೊರೊನಾ ತಡೆಗಿರುವ ಏಕೈಕ ಮಾರ್ಗವಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಒಟ್ಟು ೧೮೮ ಸಾವಿನ ಪ್ರಕರಣಗಳಲ್ಲಿ ಶೇ.೮೦ರಷ್ಟು ೧೪೦ಕ್ಕೂ ಅಧಿಕ ಸಾವುಗಳು, ರೋಗಿ ತಡವಾಗಿ ಬಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದರು.