ತುಮಕೂರು
ಜಿಲ್ಲೆಯಲ್ಲಿ ಗುರುವಾರ 14 ಕೊರೊನ ಸೋಂಕು ಪ್ರಕರಣ ವರದಿಯಾಗಿವೆ. ಇದರಲ್ಲಿ ತುಮಕೂರು ನಗರದ 9 ಜನರಲ್ಲಿ ಕೋವಿಡ್ ವೈರಸ್ ಖಚಿತವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ದೃಢಪಟ್ಟವರ ಸಂಖ್ಯೆ 333ಕ್ಕೆ ಏರಿದೆ.
ತುಮಕೂರು ತಾಲ್ಲೂಕಿನಲ್ಲಿ 9, ತಿಪಟೂರು ತಾಲ್ಲೂಕಿನಲ್ಲಿ 3, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಒಂದು ಪಾಸಿಟೀವ್ ಪ್ರಕರಣ ವರದಿಯಾಗಿವ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವವರಲ್ಲಿ 237 ಜನರಲ್ಲಿ ಸೋಂಕು ಸಕ್ರಿಯವಾಗಿದೆ, ಕೊರೊನಾ ಸೋಂಕಿನಿಂದ ಇದೂವರೆಗೆ 11 ಜನ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 333 ಸೋಂಕು ಪ್ರಕರಣ ವರದಿಯಾಗಿದ್ದು, ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿವೆ, ಇದೂವರೆಗೆ ತುಮಕೂರು ತಾ. 84, ಪಾವಗಡ ತಾ. 47, ಮಧುಗಿರಿ ತಾ. 39, ಶಿರಾ ತಾ. 27, ಗುಬ್ಬಿ ತಾ. 27. ಕೊರಟಗೆರೆ ತಾ. 31, ಕುಣಿಗಲ್ ತಾ. 23, ತಿಪಟೂರು ತಾ. 17, ಚಿಕ್ಕನಾಯಕನಹಳ್ಳಿ ತಾ. 28, ತುರುವೇಕೆರೆ ತಾ. 10 ಪ್ರಕರಣ ವರದಿಯಾಗಿವೆ.
ತುಮಕೂರು
ತುಮಕೂರು ನಗರದ ಮಹಾಲಕ್ಷ್ಮೀನಗರದ 30 ವರ್ಷದ ಪುರುಷ, 28 ವರ್ಷದ ಹೆಂಗಸು, ಬಿ.ಜಿ.ಪಾಳ್ಯದ 42 ವರ್ಷದ ಗಂಡಸು, ಶೆಟ್ಟಿಹಳ್ಳಿ ಗೇಟ್ನ 46 ವರ್ಷದ ಗಂಡು, ದೇವನೂರು ಚರ್ಚ್ ಬಡಾವಣೆಯ 64 ವರ್ಷದ ಪುರುಷ, ಸಪ್ತಗಿರಿ ಬಡಾವಣೆಯ 47 ವರ್ಷದ ಗಂಡಸು, 40 ವರ್ಷದ ಗಂಡಸು, ಎಸ್ಐಟಿ 13ನೇ ಕ್ರಾಸ್ನ 64 ವರ್ಷದ ಪುರುಷ, ಸದಾಶಿವನಗರದ 35 ವರ್ಷದ ಗಂಡಸಿಗೆ ಸೋಂಕು ಖಚಿತವಾಗಿದೆ.
ತಿಪಟೂರು
ತಿಪಟೂರಿನ ಕೆ.ಆರ್.ಬಡಾವಣೆಯ 50 ವರ್ಷದ ಪುರುಷ, ರಾಮಚಂದ್ರಪುರದ 52 ವರ್ಷದ ಗಂಡಸು, ಅರಸು ನಗರದ 48 ವರ್ಷದ ಗಂಡಸಿಗೆ ಕೊರೊನಾ ದೃಢಪಟ್ಟಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯ 54 ವರ್ಷದ ಪುರುಷ ಹಾಗೂ ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟದ 23 ವರ್ಷದ ಯುವತಿಗೆ ಸೋಂಕು ತಗುಲಿದೆ.
ಮಧುಮೇಹ, ಅಧಿಕ ರಕ್ತದ ಒತ್ತಡ, ಜ್ವರ, ಕೆಮ್ಮು, ಶೀತ ಇತರೆ ರೋಗ ಲಕ್ಷಣಗಳಿದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಿಹೆಚ್ಓ ಡಾ.ನಾಗೇಂದ್ರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವೈಯಕ್ತಿಕ ಸ್ವಚ್ಛ್ಚತೆಗಾಗಿ ಸ್ವಚ್ಛಗೊಳಿಸುವ ದ್ರಾವಣ, ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯ. ಸಾರ್ವಜನಿಕವಾಗಿ ಗುಂಪು ಗೂಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ