ತುಮಕೂರು : 164 ಜನರಿಗೆ ಪಾಸಿಟೀವ್

ತುಮಕೂರು

      ಜಿಲ್ಲೆಯಲ್ಲಿ ಗುರುವಾರ 164 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 18,923ಕ್ಕೆ ಏರಿಕೆಯಾಗಿದೆ. ತುಮಕೂರಿನ ಪಿ.ಜಿ.ಲೇಔಟ್‍ನ 55 ವರ್ಷದ ಮಹಿಳೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಾಗಿಲು ಗ್ರಾಮದ 60 ವರ್ಷದ ಗಂಡಸು, ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆಯ 49 ವರ್ಷದ ಮಹಿಳೆ, ತಿಪಟೂರು ತಾಲ್ಲೂಕು ಗೌಡನಕಟ್ಟೆ ಗ್ರಾಮದ 65 ವರ್ಷದ ಗಂಡಸು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಸತ್ತ 250 ಹಾಗೂ ಅನ್ಯ ಕಾರಣದಿಂದ ಅಸು ನೀಗಿದ 144 ಜನ ಸೇರಿ ಒಟ್ಟು 394 ಜನ ಮೃತಪಟ್ಟಿದ್ದಾರೆ.

     ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಗುರುವಾರ 241 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 16,776 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1753 ಸೋಂಕು ಸಕ್ರಿಯ ಪ್ರಕರಣಗಳಿವೆ. ಗುರುವಾರ ವರದಿಯಾದ 164 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 54 ಜನರಿಗೆ ಸೋಂಕು ಖಚಿತವಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 5, ಗುಬ್ಬಿ ತಾಲ್ಲೂಕಿನ 8, ಕೊರಟಗೆರೆ ತಾಲ್ಲೂಕಿನ 13, ಕುಣಿಗಲ್ ತಾಲ್ಲೂಕಿನ 22, ಮಧುಗಿರಿ ತಾಲ್ಲೂಕಿನ 21, ಪಾವಗಡ ತಾಲ್ಲೂಕಿನ 8, ಶಿರಾ ತಾಲ್ಲೂಕಿನಲ್ಲಿ 3, ತಿಪಟೂರು ತಾಲ್ಲೂಕಿನ 7, ತುರುವೇಕೆರೆ ತಾಲ್ಲೂಕಿನಲ್ಲಿ 23 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇದರಲ್ಲಿ ಪುರುಷರು 104, ಮಹಿಳೆಯರು 60 ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ 34 ಜನ ಸೇರಿದ್ದಾರೆ.

     ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 18,923 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 6734, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 1185 ಗುಬ್ಬಿ ತಾಲ್ಲೂಕಿನ 1361, ಕೊರಟಗೆರೆ ತಾಲ್ಲೂಕಿನ 967, ಕುಣಿಗಲ್ ತಾಲ್ಲೂಕಿನ 1202, ಮಧುಗಿರಿ ತಾಲ್ಲೂಕಿನ 1281, ಪಾವಗಡ ತಾಲ್ಲೂಕಿನ 1589, ಶಿರಾ ತಾಲ್ಲೂಕಿನಲ್ಲಿ 1552, ತಿಪಟೂರು ತಾಲ್ಲೂಕಿನ 1961, ತುರುವೇಕೆರೆ ತಾಲ್ಲೂಕಿನಲ್ಲಿ 1091 ಪ್ರಕರಣ ವರದಿಯಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link