“ಕೊರೋನಾ ವೈರಸ್ ರಕ್ಷಣಾ ಕಾರ್ಯಪಡೆ” ಸನ್ನದ್ಧವಾಗಿದೆ : ಸೌಮ್ಯ ರೆಡ್ಡಿ

ಬೆಂಗಳೂರು

    ಕೊರೋನಾ ವೈರಸ್ ಮಹಾಮಾರಿ ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಆವರಿಸುವ ಕಳವಳ ಎಲ್ಲೆಡೆ ವ್ಯಕ್ತವಾಗಿದ್ದು, ಇಡೀ ನಾಗರಿಕ ಸಮುದಾಯ ಭಯಭೀತವಾಗಿದ್ದು, ಇಂತಹ ಜಯನಗರ ವಿಧಾನಸಭಾ ಕ್ಷೇತ್ರದ ಜನತರ ಸಮಸ್ಯೆಗೆ ಸ್ಪಂದಿಸಲು “ಕೊರೋನಾ ವೈರಸ್ ರಕ್ಷಣಾ ಕಾರ್ಯಪಡೆ” ಸನ್ನದ್ಧವಾಗಿದೆ ಎಂದು ಶಾಸಕಿ ಆರ್. ಸೌಮ್ಯರೆಡ್ಡಿ ಹೇಳಿದ್ದಾರೆ.

    ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಸಂಕಷ್ಟ ಸಂದರ್ಭದಲ್ಲಿ ನಿಮ್ಮೊಂದಿಗೆ ಸದಾ ನಾವಿರುತ್ತೇವೆ. ನಿಮ್ಮ ಆತಂಕಗಳಿಗೆ ಸ್ಪಂದಿಸಿ ಆತ್ಮಸ್ಥೈರ್ಯ ತುಂಬಲು ತಮ್ಮ ನೇತೃತ್ವದ ಕೊರೋನಾ ವೈರಸ್ ರಕ್ಷಣಾ ಕಾರ್ಯಪಡೆ ಕಾರ್ಯೋನ್ಮಖವಾಗಿದೆ. ಇದರಲ್ಲಿ 300 ಕ್ಕೂ ಹೆಚ್ಚು ಸ್ವಯಂ ಸೇವಕರು, ಬಾಂಧವ ತಂಡ ಕಾರ್ಯನಿರ್ವಹಿಲಿದೆ. ಪಾಲಿಕೆ ಸದಸ್ಯರಾದ ಎನ್. ನಾಗರಾಜ್, ರಿಜ್ವಾನ್ ಮತ್ತಿರರ ಮಾರ್ಗದರ್ಶನದಲ್ಲಿ ಕ್ಷೇತ್ರ ವ್ಯಾಪ್ತಿಯ ಪೋಲೀಸ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಾಮಾಜಿಕ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳು ಕಾರ್ಯಪಡೆಯ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.

     ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಹೊರತುಪಡಿಸಿ ಇನ್ನಿತರ ಖಾಯಿಲೆಗಳಿಂದ ಬಳಲುತ್ತಿರುವ, ಹಿರಿಯ ನಾಗರಿಕರು, ಕಿಮೋಥೆರಪಿ, ಡಯಾಲಿಸಿಸ್ ಗೆ ಒಳಗಾಗುತ್ತಿರುವವರು, ಮಹಿಳೆಯರು, ಗರ್ಭಿಣಿ ಸ್ತ್ರೀಯರು ಮತ್ತಿತರರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸಲು ಈ ಕಾರ್ಯಪಡೆ ತನ್ನನ್ನು ಸಮರ್ಪಿಸಿಕೊಂಡಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಸಮುದಾಯಕ್ಕೆ ಬೇಕಾಗಿರುವ ಆರೋಗ್ಯ ಸೇವೆ ಜತೆಗೆ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಸಹ ಈ ಕಾರ್ಯಪಡೆ ಸದಸ್ಯರು ಮಾಡಲಿದ್ದಾರೆ.

     ಜಯನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಕ್ಷೇತ್ರದ ಜನ ತುರ್ತು ಅಗತ್ಯವಿರುವ ಔಷಧಿ, ಚಿಕಿತ್ಸೆ, ತುರ್ತು ಬಳಕೆ ವಸ್ತುಗಳಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ. ಅಗತ್ಯವಿರುವವರು ಸಹಾಯವಾಣಿಗೆ ಕರೆ ಮಾಡಬಹದಾಗಿದೆ. ದೂರವಾಣಿ ಸಂಖ್ಯೆ 9663859999 & 9341389999

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap