ತುಮಕೂರು
ನಗರದ ಜಿಲ್ಲಾಸ್ಪತ್ರೆಯಲ್ಲಿ ಶಂಕಿತ ಯುವಕನನ್ನು ವೈದ್ಯಾಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು ವೈದ್ಯಕೀಯ ಪರಿಕ್ಷಾ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ.ಇತ್ತೀಚೆಗೆ ಚೀನಾದಿಂದ ಯುವಕನೊಬ್ಬ ತುಮಕೂರಿಗೆ ವಾಪಸ್ಸಾಗಿದ್ದ, ಆತನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನ ರಕ್ತ, ಕಫದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ತಪಾಸಣೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ವೈದ್ಯರು ತಿಳಿಸಿದ್ದಾರೆ .
ಚೀನಾದಲ್ಲಿದ್ದ ಯುವಕ ಅಲ್ಲಿ ಕೊರೊನಾ ವೈರಸ್ ಹೆಚ್ಚಾದ ಬಳಿಕ ತುಮಕೂರಿಗೆ ವಾಪಸ್ಸಾಗಿದ್ದು. ಆತನಿಗೆ ಕೆಲವು ದಿನದ ಹಿಂದೆ ನೆಗಡಿ, ಕೆಮ್ಮು, ಜ್ವರ ನಿಶ್ಯಕ್ತಿ ಕಾಣಿಸಿಕೊಂಡಿತು. ಆತನನ್ನು ಆತನ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಿ ಜಿಲ್ಲಾ ವೈದ್ಯಾಧಿಕಾರಿಗಳು ದಿನಕ್ಕೆರಡು ಬಾರಿ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಖಾಯಿಲೆಯ ಲಕ್ಷಣಗಳು ಕೊರೊನಾ ವೈರಸ್ ಮಾದರಿಯಲ್ಲಿಲ್ಲ, ಆದರೂ ಸಹ ಮುಂಜಾಗೃತೆಯಿಂದಾಗಿ ರಕ್ತ, ಕಫ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.