ತಿಪಟೂರು :
ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಮಾಸ್ಕ್ ನೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಶೇ 90 ರಷ್ಟು ಕೊರೊನಾ ಬರುವುದಿಲ್ಲ ಇವುಗಳನ್ನು ಮರೆತರೆ ಕೊರೊನಾ ಖಚಿತ ವೆಂದು ಶಾಸಕ ಬಿ.ಸಿ.ನಾಗೇಶ್ ಎಚ್ಚರಿಸಿದರು.
ನಗರಸಭೆ ಆವರಣದಲ್ಲಿ ಏರ್ಪಡಿಸಿದ್ದ ಎಲ್ಲಾ ವರ್ತಕರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಸಾವುಗಳು ಸಂಭವಿಸುತ್ತಲೇ ಇದೆ, ಇದಕ್ಕೆ ಮುಖ್ಯ ಕಾರಣವೇ ಲಾಕ್‍ಡೌನ್ ಸಮಯದಲ್ಲಿ ನಾವೆಲ್ಲರೂ ಮಾಸ್ಕ್ ಮತ್ತು ಸಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಿದೆ ಆದರೆ ಈಗ ಅದನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಕೊರೊನಾ ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟಿದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದು ಇಂದು ಪಂಚಾಯಿತಿಗಳಲ್ಲಿ 100ರ ಗಡಿದಾಟಿದ್ದು ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ತಿಪಟೂರು ತಾಲ್ಲೂಕು ಕೊರೊನಾದಲ್ಲಿ ತುಮಕೂರುನ್ನು ಬಿಟ್ಟರೆ 2ನೇ ಸ್ಥಾನದಲ್ಲಿದ್ದು ತಾಲ್ಲೂಕಿನಲ್ಲಿ ಒಟ್ಟು 1220 ಜನ ಸೋಂಕಿತರಲ್ಲಿ ಒಟ್ಟು ಸುಮಾರು 1000ಕ್ಕೂ ಅಧಿಕ ಜನರು ಗುಣಮುಖರಾಗಿದ್ದು ಕೊರೊನಾದಿಂದ ಒಟ್ಟು 15 ಜನರು ಮೃತರಾಗಿದ್ದು ಮತ್ತೆ ಒಂದೇ ಮನೆಯಲ್ಲಿ ಸಂಖಿತರು ಹೆಚ್ಚಾಗುತ್ತಲಿದ್ದು ಸಾವು ಸಂಭವಿಸುತ್ತಿದೆ ಆದ್ದರಿಂದ ಸಾರ್ವಜನಿಕರು ಕೊರೊನಾದ ಬಗ್ಗೆ ಜಾಗೃತೆ ವಹಿಸಿವುದರ ಜೊತೆಗೆ ವರ್ತಕರು ಮುಖ್ಯವಾಗಿ ದಿನಸಿ ವರ್ತಕರು ಮಾಲಿಕರ ಆದಿಯಾಗಿ ಕೆಲಸಗಾರರು ಸಹ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ನೀವು ತಿಳಿಸಿದ ದಿನದಂದು ತಾಲ್ಲೂಕು ಆಸ್ಪತ್ರೆಯಿಂದ ಸಿಬ್ಬಂದಿಯನ್ನು ನಿಯೋಜಿಸ ಪರೀಕ್ಷೆ ಮಾಡಲಾಗುವುದೆಂದು ತಿಳಿಸಿದರು.
ಹಣದಿಂದ ಕೊರೊನಾ ಹೆಚ್ಚುತ್ತಿದ್ದು ಡಿಜಿಟಲ್ ಬ್ಯಾಂಕಿಂಗ್ ಉಪಯೋಗಿಸಿ : ಹಣವು ಹೆಚ್ಚಾಗಿ ಒಬ್ಬರಿಂದ ಒಬ್ಬರಿಗೆ ತಲುಪುತ್ತದೆ ಇದರಿಂದ ಕೊರೊನಾ ಹೆಚ್ಚಾಗುತ್ತಿರಬಹುದು ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟನ್ನು ಮಾಡುವ ಮೂಲಕ ಕೊರೊನಾವನ್ನು ಹತೋಟಿಗೆ ತರಬಹುದೆಂದು ವರ್ತಕರಿಗೆ ಕರೆ ನೀಡಿದರು.
ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ಮಾತನಾಡಿನಾವು ಎಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ವರ್ತಕರು ಸಾರ್ವಜನಿಕರಿಗೆ ಮಾಸ್ಕ್ ದರಿಸುವಂತೆ ತಿಳಿಸಿ ಅವರೊಂದಿಗೆ ವ್ಯಾಪಾರಮಾಡಿ ಸಾದ್ಯವಾದಷ್ಟು ಸ್ಯಾನಿಟೈಸೆಷನ್ ಮಾಡಿಸಿ, ಜೊತೆಗೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡಲು ಗುರುತು ಮಾಡಿ ಕೊರೊನಾ ನಿಯಂತ್ರಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಈ ವರ್ಷಆರೋಗ್ಯವಾಗಿದ್ದರೆ ಮುಂದಿನ ವರ್ಷದುಡಿಯಬಹುದು ನೆನಪಿಡಿಎಂದು ವರ್ತಕರಿಗೆ ತಿಳಿಸಿದರು.
ಆಂಬುಲೆನ್ಸ್ ದಂದೆಯಾಗಿದೆ :ಕೋವಿಡ್ ಸಂದರ್ಭದಲ್ಲಿ ಆಂಬುಲೆನ್ಸ್ ನವರು ಹೆಚ್ಚು ಹಣವನ್ನು ತೆಗೆದುಕೊಳ್ಳುತ್ತಿದ್ದಾರೆಂದು ಸಭೆಯಲ್ಲಿ ಬಂದ ಮಾತಿಗೆ ಬೆಂಗಳೂರಿಗೆ 18ರಿಂದ 20 ಸಾವಿರ ಮತ್ತು ತುಮಕೂರಿಗೆ 10 ಸಾವಿರವನ್ನು ಪಡೆಯುತ್ತಿದ್ದಾರೆ ಎಂದಿದ್ದಕ್ಕೆ ಅಂತವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ವೃತ್ತ ನಿರೀಕ್ಷಕ ಶಿವಕುಮಾರ್ ಗೆ ತಿಳಿಸಿದರು ಮತ್ತು ಅಂತಹ ದೂರುಗಳೇನಾದರು ಇದ್ದರೆ ಕರೆಮಾಡಿ ತಿಳಿಸಿ, ತಿಳಿಸದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದೆಂದು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕಿ ಜಯಲಕ್ಷ್ಮಿ ಸದಾಶಿವ್, ಪೌರಾಯುಕ್ತ ಉಮಾಕಾಂತ್, ವರ್ತಕರುಗಳು ಹಾಜರಿದ್ದರು.ಈ ಸಂದರ್ಭದಲ್ಲಿ ವರ್ತಕರು ಕೆಲವು ಸೂಚನೆಗಳನ್ನು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ