ದೇಶದ ಗಮನ ಸೆಳೆದ ಪಾತಗಾನಹಳ್ಳಿ ಸಹೋದರರ ತೋಟ

ಕೊರಟಗೆರೆ

ತಾಲ್ಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿ ನೈಸರ್ಗಿಕ ಕೃಷಿಕರಾದ ಪಿ.ಎನ್. ನಟರಾಜು ಮತ್ತು ಪಿ . ಎನ್ . ನಾಗರಾಜಯ್ಯನವರ ತೋಟದಲ್ಲಿ ಶನಿವಾರ ಶೂನ್ಯ ಬಂಡವಾಳ ಕೃಷಿಯ ಬಗ್ಗೆ ಸುಭಾಶ್ ಪಾಳೇಕರ್ ಜೊತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ರೈತರು ಮಾಹಿತಿ ಪಡೆದುಕೊಂಡರು. ದಿನ ಪೂರ್ತಿ ರೈತರುಗಳಿಗೆ ಪಾಳೆಕರ್ ಮಾಹಿತಿ ನೀಡಿದರು.

       ಕೃಷಿಯಲ್ಲಿ ರೈತರು ಉತ್ತಮ ಲಾಭ ಪಡೆಯಲು ಬೆಳೆಗಳಲ್ಲಿ ಹೊಂದಾಣಿಕೆ ಮಾಡುವುದು ಬಹಳ ಮುಖ್ಯ ಸಹೋದರರು ಹೆಚ್ಚು, ಅಲ್ಪ, ಮಧ್ಯಮ ಬಿಸಿಲು ಕೇಳುವ ಬೆಳೆಗಳನ್ನು ಮಿಶ್ರ ಬೇಸಾಯದಲ್ಲಿ ಹೇಗೆ ಅಳವಡಿಸಿಕೊಂಡು ಪ್ರಗತಿ ಸಾಧಿಸಿದ್ದಾರೆ? ಇದರಿಂದ ಶ್ರಮ, ನೀರು ಮತ್ತು ಹಣ ಹೇಗೆ ಉಳಿತಾಯವಾಗುತ್ತದೆ ಎಂಬುದನ್ನಲ್ಲದೆ ನಾಟಿ ಹಸುವಿನ ಸಗಣಿ ಹಾಗೂ ಗಂಜಲದಿಂದ ಜೀವಾಮೃತ ತಯಾರಿಸಿ ಪಾತಗಾನಹಳ್ಳಿ ಸಹೋದರರು ಪಡೆಯುತ್ತಿರುವ ಇಳುವರಿಯ ಬಗ್ಗೆ ತೋಟಗಳಲ್ಲಿ ಓಡಾಡಿ ವಿವರಿಸಿದರು.

       ಬೆಳಗ್ಗೆ ಹತ್ತು ಗಂಟೆಗೆ ಪ್ರಾರಂಭವಾದ ಸುಭಾಶ್ ಪಾಳೇಕರ್ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಶಿಕ್ಷಣ ಸಂಜೆ ಆರು ಗಂಟೆಗೆ ಮುಕ್ತಾಯವಾಯಿತು. ತೋಟದ ಹಲವು ಕಡೆ ರೈತರು ನೆಲದ ಮೇಲೆ ಕುಳಿತು ಕೊಂಡು ಮಾಹಿತಿ ಪಡೆದು ಕೊಂಡರು. ಆಗಮಿಸಿದ ಹೆಚ್ಚಿನವರು ಯುವಕರಾಗಿದ್ದು ಹೊಸದಾಗಿ ಕೃಷಿ ಪ್ರಾರಂಭಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳು, ಸುಲಭ ಮಾರ್ಗಗಳ ಬಗ್ಗೆ ತಾಳ್ಮೆಯಿಂದ ಕೇಳಿದರು. ಪಿ.ಎನ್. ನಟರಾಜು 30 ಮತ್ತು ಪಿ.ಎನ್. ನಾಗರಾಜಯ್ಯ 25 ಎಕರೆಯಲ್ಲಿ 11 ವರ್ಷಗಳಿಂದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ರೈತರು ತಂಡೋಪತಂಡವಾಗಿ ಇಲ್ಲಿಗೆ ಭೇಟಿ ನೀಡಿ ಸಹೋದರರಿಂದ ಮಾಹಿತಿ ಪಡೆಯುತ್ತಿದ್ದಾರೆ.

       ಸುಭಾಶ್ ಪಾಳೆಕರ್ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ನೀಡುತ್ತಿದ ಮಾಹಿತಿಯನ್ನು ತುಮಕೂರಿನ ಪ್ರಸನ್ನಮೂರ್ತಿ ತೆಲುಗು, ತಮಿಳು, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತರ್ಜುಮೆ ಮಾಡಿ ರೈತರಿಗೆ ತಿಳಿಸಿದರು.

      ಪಿ.ಎನ್.ನಟರಾಜು ಮತ್ತು ಪಿ.ಎನ್. ನಾಗರಾಜಯ್ಯ ಕುಟುಂಬದವರು ಸುಭಾಶ್ ಪಾಳೆಕರ್‍ರವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ. ಸಿ.ಪಿ.ಚಂದ್ರಶೇಖರ್, ಪ್ರಸನ್ನಮೂರ್ತಿ, ಪಿ.ಎನ್. ವಿದ್ಯಾ ಪ್ರಸನ್ನ ಮೂರ್ತಿ, ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ದೇಶದ ಕೆಲವು ರಾಜ್ಯಗಳ ಯುವ ರೈತರು ಹಾಜರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link