ಕಿರುಕುಳ ನೀಡುತ್ತಿದ್ದ ಯವಕನನ್ನು ಕೊಂದ ದಂಪತಿ ಬಂಧನ

ಬೆಂಗಳೂರು

    ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಹಾಗೂ ಶೌಚಗೃಹದಲ್ಲಿ ಜೊತೆಗಿದ್ದ ಪೋಟೋ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿ 4 ಲಕ್ಷದವರೆಗೆ ಸುಲಿಗೆ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಕೊಡಲಿಯಿಂದ ಹೊಡೆದು ಕೊಲೆಗೈದು ಗೋಣಿ ಚೀಲದಲ್ಲಿ ಕಟ್ಟಿ ಬಿಸಾಕಿ ಹೋಗಿದ್ದ ದಂಪತಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ಶುಕ್ರವಾರ ಲಗ್ಗೆರೆಯ ಮೌಂಟ್ ಸೆನೋರಿಯಾ ಸ್ಕೂಲ್ ಕಾಂಪೌಂಡ್ ಬಳಿ ಗೋಣಿಚೀಲದಲ್ಲಿ ಕಟ್ಟಿ ಎಸೆದಿದ್ದ ಮೃತದೇಹವನ್ನು ನಂದಿನಿ ಲೇಔಟ್‌ನ ಕ್ಯಾಬ್ ಚಾಲಕ ಸಂತೋಷ್ (31) ಎಂದು ಗುರುತಿಸಿ ಕೊಲೆ ಕೃತ್ಯವೆಸಗಿದ ಲಗ್ಗೆರೆಯ ಮಂಜು ಅಲಿಯಾಸ್ ಮಗ (35) ಹಾಗೂ ಆತನ ಪತ್ನಿ ಸಾವಿತ್ರಿ (28) ದಂಪತಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

     ಶುಕ್ರವಾರ ಬೆಳಿಗ್ಗೆ 6.30ರ ವೇಳೆ ಲಗ್ಗೆರೆಯ ಮೌಂಟ್ ಸೆನೋರಿಯಾ ಸ್ಕೂಲ್ ಕಾಂಪೌಂಡ್ ಬಳಿ ಗೋಣಿಚೀಲದಲ್ಲಿ ಕಟ್ಟಿ ಎಸೆದಿದ್ದ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಪೊಲೀಸರು ತನಿಖೆ ಕೈಗೊಂಡಾಗ ಮೃತದೇಹವು ಸಂತೋಷ್ ಎನ್ನುವುದು ಪತ್ತೆಯಾಯಿತು.

   ಸಂತೋಷ್‌ನ ತಂದೆ ಕಾಳಿಂಗೇಗೌಡ ಹಾಗೂ ತಾಯಿ ನನ್ನ ಮಗನನ್ನು ಇತ್ತೀಚೆಗಷ್ಟೆ ವಿವಾಹವಾಗಿದ್ದ. ಪತ್ನಿ ಯಮುನಾ ಹಾಗೂ ಆಕೆಯ ತಾಯಿ ಶ್ಯಾಮಲಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.ಏಕೆಂದರೆ ಮೂದಲು ಶ್ಯಾಮಾಲ ಸಂತೋಷ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು ನಂತರ ಆಕೆಯ ಪುತ್ರಿ ಯುಮುನಾ ಜೊತೆ ಸಂಬಂಧವಿಟ್ಟುಕೊಂಡಿದ್ದನು.

    ಈ ಸಂಬಂಧ ಪೊಲೀಸ್ ಠಾಣೆಗೆ ಹೋಗುವುದನ್ನು ತಪ್ಪಿಸಲು ಶ್ಯಾಮಲ ಮುಂದಾಗಿ ಮಗಳನ್ನೆ ಸಂತೋಷ್‌ಗೆ ಕೊಟ್ಟು ವಿವಾಹ ಮಾಡಿದ್ದರು ಈ ವಿಷಯವಾಗಿ ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿತ್ತು ಈ ಬಗ್ಗೆ ತನಿಖೆ ಕೈಗೊಂಡಾಗ ಕೊಲೆಗೆ ಪತ್ನಿ ಹಾಗೂ ಆಕೆಯ ತಾಯಿ ಕಾರಣವಲ್ಲ ಎನ್ನುವುದು ಕಂಡುಬಂತು

    ಪ್ರಕರಣದ ಬೆನ್ನು ಹತ್ತಿದ ಇನ್ಸ್‌ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಸಂತೋಷ್ ಮೊಬೈಲ್‌ಗೆ ಬಂದಿರುವ ಕರೆಗಳ ಮಾಹಿತಿ ಪಡೆದು ಆತ ಚೀಟಿ ವ್ಯವಹಾರ ನಡೆಸುತ್ತಿದ್ದ ಬಂಧಿತ ಆರೋಪಿ ಮಂಜನನ್ನು ಅನುಮಾನಾಸ್ಪದದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.

ವಿಡಿಯೋಕ್ಕಾಗಿ ಕೊಲೆ

   ವಿಚಾರಣೆಯಲ್ಲಿ ಮಂಜ ನಾನು ನನ್ನ ಪತ್ನಿ ಸಾವಿತ್ರಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಮೊದಲು ಆಟೋ ಚಾಲಕನಾಗಿದ್ದ ಸಂತೋಷ್ ನಮ್ಮಿಬ್ಬರಿಗೂ ಪರಿಚಿತನಾಗಿದ್ದ, ನಂತರ ಕ್ಯಾಬ್ ಚಾಲಕ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ನಮ್ಮ ಬಳಿ ವ್ಯವಹಾರಕ್ಕೆ ಮುಂದಾಗಿ ಚೀಟಿ ಹಾಕಿದ್ದ ಚೀಟಿ ಹಣ ಕೊಡಲು ಬರುವಾಗ ನಮ್ಮ ವಿಶ್ವಾಸ ಗಳಿಸಿದ್ದ.

   ಅರ್ಧದಲ್ಲೇ ಚೀಟಿ ಹಣವನ್ನು ನೀಡುವಂತೆ ಪೀಡಿಸುತ್ತಿದ್ದ. ಅಲ್ಲದೆ ನಮ್ಮ ಮನೆಗೆ ಬಂದು ಹೋಗುವಾಗ ನಾನು ನನ್ನ ಪತ್ನಿಯ ಶೌಚಗೃಹದಲ್ಲಿದ್ದ ಖಾಸಗಿ ಫೋಟೊ ವೀಡಿಯೋ ಹಾಗೂ ಲೈಂಗಿಕ ಕ್ರೀಯೆಯ ವಿಡಿಯೋ ಮಾಡಿಕೊಂಡು ಅದನ್ನು ಎಲ್ಲರಿಗೂ ತೋರಿಸುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.

ನಾಲ್ಕು ಲಕ್ಷ ಸುಲಿಗೆ

   ಕಳೆದ ನಾಲ್ಕೈದು ವರ್ಷಗಳಿಂದ ನಮ್ಮನ್ನು ಶೌಚಗೃಹದಲ್ಲಿನ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 4 ಲಕ್ಷವರೆಗೆ ಸುಲಿಗೆ ಮಾಡಿದ್ದಲ್ಲದೆ ನನ್ನ ಪತ್ನಿ ಸಾವಿತ್ರಿ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಇದರಿಂದ ನಾವಿಬ್ಬರು ನೊಂದು ಬೇಸತ್ತಿದ್ದೆವು.ಸಂತೋಷ್‌ನ ಕಾಟ ತಾಳಲಾರದೆ ಆತನನ್ನು ಮುಗಿಸಿ ನೆಮ್ಮದಿಯಾಗಿರಬೇಕೆಂದು ನಿರ್ಧರಿಸಿ, ಕಳೆದ ನ.14 ರಂದು ರಾತ್ರಿ ಉಪಾಯ ಮಾಡಿ ಮನೆಗೆ ಕರೆಸಿಕೊಂಡು ಕೊಡಲಿಯಿಂದ ಹೊಡೆದು ನಾನು ನನ್ನ ಪತ್ನಿ ಸೇರಿ ಕೊಲೆ ಮಾಡಿದೆವು.

    ನಂತರ ಕೊಲೆ ಕೃತ್ಯ ಯಾರಿಗೂ ಗೊತ್ತಾಗಬಾರದೆನ್ನುವ ಕಾರಣಕ್ಕೆ ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿ ಲಗ್ಗೆರೆ ಬಳಿ ಎಸೆದು ಬಂದಿದ್ದೆವು ಎಂದು ಮಾಹಿತಿ ನೀಡಿದ್ದಾನೆ. ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link