ಮಧುಗಿರಿ:
ನಿಶಕ್ತಿ ಹಾಗೂ ಗಂಭೀರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಳಲುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಉಪಚರಿಸಿ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಮಿಡಿಗೇಶಿ ಹನುಮಂತಪುರ ರಸ್ತೆಯ ಸಮೀಪ ಸುಮಾರು 65 ವರ್ಷದ ಮಾತು ಬಾರದ ವ್ಯಕ್ತಿಯೊಬ್ಬ ನಿಶಕ್ತಿ ಹಾಗೂ ಎಡಭಗದ ಕಾಲಿಗೆ ಹುಳುಗಳಿಂದ ಕೂಡಿ ಗಂಭೀರವಾಗಿ ಘಾಯವಾಗಿ ನಡೆಯಲು ಬಾರದೆ ರಸ್ತೆ ಸಮೀಪವಿದ್ದ ಅನಾಥ ವ್ಯಕ್ತಿಯನ್ನು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಗರಣಿ ಗೀರೀಶ್ ಮತ್ತು ಕೆಲ ಪದಾಧಿಕಾರಿಗಳು ಜೊತೆ ಸೇರಿ ಆತನನ್ನು ತಮ್ಮದೆ ಕಾರಿನಲ್ಲಿ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಿ ನಂತರ ಸೋಮವಾರ ರಾತ್ರಿ ವೈದ್ಯರ ಸೂಚನೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರೋಗಿಯ ಜೊತೆಗೆ ಖುದ್ದಾಗಿ ಹೋಗಿ ಅನಾಥ ವ್ಯಕ್ತಿಯನ್ನು ದಾಖಲಿಸಿ ಮಾನವ ಒಂಧುತ್ವ ವೇದಿಕೆಯ ಪಧಾಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
