ಮಂಡ್ಯ
ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಿಪಿಐ(ಎಂ) ಪಕ್ಷ ಬೆಂಬಲ ಸೂಚಿಸಿದೆ.
ಸಿಪಿಐ(ಎಂ) ಪಕ್ಷವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ ಎಂದು ತಪ್ಪು ಸುದ್ದಿ ಹಬ್ಬಿದ್ದ ಹಿನ್ನೆಯಲ್ಲಿ ಹಾಗಾಗಿ ಇಂದು ಸಿಪಿಐ(ಎಂ) ಸ್ಪಷ್ಟನೆ ನೀಡಿದೆ.
ಸಂವಿಧಾನ ಬದಲಾಯಿಸುವ ಮಾತನ್ನಾಡುವ, ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಪಕ್ಷದ ಬೆಂಬಲ ಪಡೆದಿರುವ ಸುಮಲತಾ ಅವರಿಗೆ ಸಿಪಿಐ(ಎಂ) ಬೆಂಬಲ ನೀಡುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದು, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದೆ.
ಸುಮಲತಾ ಹಾಗೂ ನಿಖಿಲ್ ನಡುವಿನ ಚುನಾವಣಾ ಯುದ್ಧ ದಿನೇ-ದಿನೇ ಜೋರಾಗುತ್ತಿದೆ. ನಿಖಿಲ್ ಕುಮಾರಸ್ವಾಮಿಗೆ ಈಗಾಗಲೇ ಕಾಂಗ್ರೆಸ್ ಬೆಂಬಲ ನೀಡಿದೆ. ಅವರಿಗೆ ಈಗ ಸಿಪಿಐಎಂ ಬೆಂಬಲ ಸಹ ದೊರೆತಿದೆ. ಸುಮಲತಾ ಅವರಿಗೆ ಬಿಜೆಪಿ ಮತ್ತು ರೈತ ಸಂಘ ಬೆಂಬಲ ನೀಡಿದೆ.
