ಚೇಳೂರು
ಅಪರಾಧ ತಡೆಗಟ್ಟುವುದರಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಗ್ಗೆ ಅರಿವು ಮೂಡಿಸಲು ಚೇಳೂರು ಪಿಎಸ್‍ಐ ಲಕ್ಷ್ಮೀಕಾಂತ ಹಾಗೂ ಸಿಬ್ಬಂದಿಗಳು ಶಾಲಾ ಮಕ್ಕಳಿಂದ ಪೊಲೀಸ್ ಠಾಣೆಯಿಂದ ಗ್ರಾಮದ ಪ್ರಮುಖ ಬೀದಿಗಳಲಿ ಜಾಥ ನೆಡೆಸಿ ಮಾತನಾಡುತ್ತ ವಿದ್ಯಾರ್ಥಿ , ವಿದ್ಯಾರ್ಥಿಯರು , ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಬಾರದು. ಗಾಂಜಾ,ಅಫೀಮಿನ ಚಟಕ್ಕೆ ಮಕ್ಕಳು ಬಲಿಯಾಗಬಾರದು.
ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಒಡಾಡುತ್ತಿರುವಾಗ ತಾವು ಧರಿಸಿರುವ ಒಡವೆಗಳ ಬಗ್ಗೆ ಜೋಪಾನ ಮಾಡಿಕೊಂಡು ದ್ವಿಚಕ್ರ ವಾಹನ ಅಥವಾ ನೆಡೆದು ಬರುವ ಸರಗಳ್ಳರ ಬಗ್ಗೆ ಎಚ್ಚರವಹಿಸಿ. ಯಾವುದೇ ಸಮಾಜಘಾತಕ ಕೃತ್ಯಗಳು .ಪೊಜೆಗಳು ಮಾಡುವ ನೆಪದಲ್ಲಿ.ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ,ಮನೆ ಬಾಗಿಲಿಗೆ ಬರುವ ವ್ಯಕ್ತಿಗಳ ಮಾತಿಗೆ ಮರಳಾಗದೆ.
ಹಣಕಾಸು ನೆಡೆಯುವ ಸ್ಥಳಗಳಲ್ಲಿ.ನಿಮ್ಮಗಮನವನ್ನು ಬೇರೆಡೆ ಸಳೆಯುವರ ಬಗ್ಗೆ,ಗೃಹ ಉಪಯೋಗಿ ವಸ್ತುಗಳ ರಿಪೇರಿ ಮಾಡುವ ನೆಪಗಳಲ್ಲಿ ಮನೆಗಳಿಗೆ ಬರುವರ ಬಗ್ಗೆ ಹೀಗೆ ಅನೇಕ ರೀತಿಯಿಂದ ಸಾರ್ವಜನಿಕರು ಎಚ್ಚರ ವಹಿಸ ಬೇಕಾಗಿದೆ ಜೊತೆಗೆ ಭಯೋತ್ಪಾದನೆ , ರೌಡಿ ಮತ್ತು ಸಮಾಜ ಘಾತಕ,ಕೋಮು ಗಲಬೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೆ ಹತ್ತಿರ ಪೊಲೀಸ್ ಠಾಣೆಗೆ ತಿಳಿಸಿ.
ಮಾಹಿತಿ ನೀಡಿದವರ ಬಗ್ಗೆ ಗೌಪ್ಯವಾಗಿರುತ್ತಾದೆ. ನಿಮ್ಮಗಳ ಯಾವುದೇ ಸಮಸ್ಯೆಗಳು ಇದ್ದರೆ ಪೊಲೀಸ್ ಠಾಣೆಗೆ ತಿಳಿಸಿ ನಾವು ನಿಮ್ಮಗಳಿಗೆ ಕಾನೂನು ರೀತಿಯಲ್ಲಿ ರಕ್ಷಣೆಯೊಂದಿಗೆ ಸಹಾಯವನ್ನು ಮಾಡುತ್ತವೆ ಎಂದರು.ಇವರೊಂದಿಗೆ ಎಎಸೈ ರವೀಂದ್ರಶೆಟ್ಟಿ . ಪೇದೆಗಳಾದ ಮಧು.ಸಂಜೀವರೆಡ್ಡಿ.ಮಧುಸೂಧನ್.ಸಾರ್ವಜನಿಕರು ಹಾಗೂ ಇತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








