ಎಂ ಎನ್ ಕೋಟೆ
ಅಪರಾಧಗಳನ್ನು ತಡೆಯಬೇಕಾದರೆ ಮುನ್ನೆಚ್ಚರಿಕೆಯನ್ನು ವಹಿಸಲೆಬೇಕು ಎಂದು ಎಎಸ್‍ಐ ಶಂಕರೇಶ್ ತಿಳಿಸಿದರು.
ಅವರು ಶನಿವಾರ ಗುಬ್ಬಿ ತಾಲ್ಲೂಕಿನ ಮಂಚಲದೊರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪರಿಚಿತರ ನಡುವೆ ಹೆಚ್ಚಿನ ಸಲಿಗೆಯಿಂದ ಇರಬಾರದು. ಮನೆಯಿಂದ ಹೊರಗಡೆ ಹೋಗಬೇಕಾದರೆ ಮನೆಗಳಿಗೆ ಬೀಗ ಹಾಕಿಕೊಂಡು ಹೋಗಬೇಕು. ಯಾವುದೇ ಕಾರ್ಯಕ್ರಮಗಳಿಗ ಹೋಗಬೇಕಾದರೆ ಬೆಲೆ ಬಾಳುವ ವಸ್ತುಗಳನ್ನು ಹಾಕಿಕೊಂಡು ಹೋಗಬಾರದು. ಮನೆಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡದೆ ಬ್ಯಾಂಕ್‍ಲಾಕರ್‍ಗಳಲ್ಲಿ ಇಡಬೇಕು. ಬಾಲಕಿಯರಿಗೆ 18 ವರ್ಷದ ಒಳಗಡೆ ಮದುವೆ ಮಾಡಿದರೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂದು ತಿಳಿಸಿದರು.
ಪೋಷಕರು ಮಕ್ಕಳನ್ನು ಅಪರಾಧ ಮಾಡದಂತೆ ನೋಡಿಕೊಳ್ಳಬೇಕು. ಮದ್ಯಪಾನ ಮಾಡಿ ಬೈಕ್‍ಗಳನ್ನು ಓಡಿಸಬಾರದು. ಕಾನೂನಿನ ಪ್ರಕಾರ ಅಪರಾಧ ಲೈಸೆನ್ಸ್ ಇಲ್ಲದೆ ವಾಹನಗಳನ್ನು ಓಡಿಸಬಾರದು. ಓಡಿಸಿದರೆ ಮುಂದೆ ಒಂದು ದಿನ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ಮಧು, ರವಿ, ರೆಡ್ಡಿ, ಮಂಜುನಾಥ್, ನಟರಾಜು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








