ಪಾಟ್ನಾ:
ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರು ಮೋದಿ ಎಂದು ಹೆಸರಿರುವ ಎಲ್ಲರೂ ಕಳ್ಳರೇ ಎಂದು ಆರೋಪಿಸಿದ್ದರು ಇದಕ್ಕಾಗಿ ಅವರ ವಿರುದ್ಧ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಮೋದಿ ಜಾತಿಯನ್ನು ನಿಂದಿಸಿ, ಅವಮಾನ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 550ರ ಪ್ರಕಾರ ಪಾಟ್ನಾ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕುಮಾರ್ ಗುಜ್ ನನ್ ಅವರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಎಲ್ಲಾ ಮೋದಿಗಳು ಕಳ್ಳರೇ ಎಂದು ಹೇಳಿದ್ದರು. ಆದರೆ ಅದು ಹೇಗೆ ಮೋದಿ ಹೆಸರಿನ ಎಲ್ಲರೂ ಕಳ್ಳರು ಸಾಧ್ಯ ಎಂದು ಸುಶೀಲ್ ಮೋದಿ ಪ್ರಶ್ನಿಸಿದ್ದಾರೆ.