ಗೋಮಾಳ ಅಕ್ರಮ ಉಳುಮೆ : 8 ಜನರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು

ಮಿಡಿಗೇಶಿ

     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಪಂ ವ್ಯಾಪ್ತಿಯ ನಾಗಲಾಪುರ ಗ್ರಾಮಕ್ಕೆ ಸೇರಿದ ಸರ್ಕಾರಿ ಗೋಮಾಳದಲ್ಲಿ ಗ್ರಾಮದ ಕೆಲವರು ಕೆಲ ಅಧಿಕಾರಿಗಳವರ ಬೆಂಬಲದಿಂದಾಗಿ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಕೊಳವೆ ಬಾವಿ, ಉಚಿತ ಪಂಪು ಮೋಟಾರನ್ನು ಪಡೆದಿದ್ದು ಸದರಿ ಭೂಮಿಯನ್ನು ಆಧಾರವಾಗಿ ಬ್ಯಾಂಕಿನಲ್ಲಿ ಸಾಲ ಪಡೆದಿರುವುದಾಗಿ ತಿಳಿದುಬಂದಿದೆ.

    ಗೋಮಾಳದ ಜಮೀನು ಅತಿಕ್ರಮಿಸಿ ಕಬಳಿಸುತ್ತಿರುವುದನ್ನು ಮನಗಂಡ ಇದೇ ಗ್ರಾಮದ ಎಂಟು ರೈತರು ಅಲ್ಲಿನÀ ನೀಡಲಗಿರಿ ಮರಗಳನ್ನು ಕಡಿದು, ನಾಶ ಮಾಡಿ ಭೂಮಿಯನ್ನು ಉಳುಮೆ ಮಾಡಲು ಮುಂದಾಗಿದ್ದರು. ಈ ಬಗ್ಗೆ ನಾಗಲಾಪುರ ಗ್ರಾಮಸ್ಥರು ಒಟ್ಟಾಗಿ ಸೇರಿ ಅರಣ್ಯ ಇಲಾಖೆ ಹಾಗೂ ತಹಸೀಲ್ದಾರರ ಗಮನಕ್ಕೆ ತಂದಿದ್ದರು. ತಾಲ್ಲೂಕಿನ ದಂಡಾಧಿಕಾರಿ, ಗ್ರಾಮಲೆಕ್ಕಿಗರು, ಉಪತಹಸೀಲ್ದಾರ್, ತಾಲ್ಲೂಕು ಸರ್ವೆ ಅಧಿಕಾರಿಗಳು ಗೋಮಾಳದ ಭೂಮಿಯನ್ನು ಕಬಳಿಸುತ್ತಿರುವ ಎಂಟು ಜನ ರೈತರ ಮೇಲೆ ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿರುತ್ತಾರೆ.

     ನ. 16 ರಂದು ನಾಗಲಾಪುರ ಗ್ರಾಮಸ್ಥರು ತºಸೀಲ್ದಾರ್‍ಗೆ ನೀಡಿದ ಲಿಖಿತ ದೂರಿನನ್ವಯ ತಹಸೀಲ್ದಾರ್ ನಂದೀಶ್ ಗೋಮಾಳದ ಹಾಲಿ ಬೆಳೆದಿರುವ ಬೆಳೆಯನ್ನು ಹರಾಜು ಮಾಡಿ, ಇದರಿಂದ ಬಂದಂತಹ ಹಣವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಉಪತಹಸೀಲ್ದಾರ್‍ಗೆ ಲಿಖಿತ ಆದೇಶವನ್ನು ಜಾರಿ ಮಾಡಿದ್ದಾರೆ. ಅಲ್ಲದೆ ಸರ್ವೆ ಪ್ರಕಾರ ಸರ್ಕಾರದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆಸಿರುವ ಕೊಳವೆ ಬಾವಿಯು ಸಹ ಗೋಮಾಳಕ್ಕೆ ಸೇರಿದೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link