ಕಾರ್ಪೊರೇಟ್ ಕಂಪನಿಗಳೇ ಬೇಸಾಯ ಬಿಟ್ಟು ತೊಲಗಿ

ತಿಪಟೂರು :

    ಅಂದು ಸ್ವತಂತ್ರ್ಯ ಭಾರತಕ್ಕಾಗಿ ಮಹಾತ್ಮ ಗಾಂಧೀಜಿ ಆಗಸ್ಟ್ 8 ರಂದು ಕ್ವಿಟ್ ಇಂಡಿಯಾ ಆಕ್ಟ್ ಚಳುವಳಿ ಪ್ರಾರಂಭಿಸಿದರು, ರೈತರಾದ ನಾವಿಂದು ಕಾರ್ಪೋರೇಟ್ ಕಂಪನಿಗೆಳೇ ಬೇಸಾಯ ಬಿಟ್ಟು ತೊಲಗಿ ಎಂದು ಎಂಬ ಪ್ರತಿಭಟನೆ ಮಾಡಬೇಕಾಗಿ ಬಂದಿರುವುದು ವಿಪರ್ಯಾಸವೆಂದು ರೈತ ಕೃಷಿ ಕಾರ್ಮಿಕ ಸಂಘಟನೆಯ ಸ್ವಾಮಿ ವಿಷಾಧಿಸಿದರು.

   ಪತ್ರಿಕಾ ಗೋಷ್ಟಿಗೂ ಮೊದಲು ನಿನ್ನೆ ನಿಧನರಾದ ಎ.ಪಿ.ಎಂ.ಸಿ ಅಧ್ಯಕ್ಷ ಮಡೆನೂರು ಲಿಂಗರಾಜು ರವರಿಗೆ ಶ್ರದ್ದಾಂಜಲಿ ಸಲ್ಲಿಸಲು ಮೌನವನ್ನು ಆಚರಿಸಲಾಯಿತು.ನಗರದ ರೈತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆಯ ಮುಖಾಂತರ ಕಾನೂನುಗಳನ್ನು ಜಾರಿಗೆತರುತ್ತಿವೆ ಏಕೆ ಅವುಗಳನ್ನು ಶಾಸನಸಭೆಗಳಲ್ಲಿ ಮಂಡಿಸುತ್ತಿಲ್ಲ ಶಾಸನ ಸಭೆಗಳಲ್ಲಿ ಮಂಡಿಸಿದರೆ ಎಲ್ಲಿ ಜಾರಿಯಾಗುವುದಿಲ್ಲವೆಂದು ಹೆದರಿ ಹಿಂಬಾಗಿಲ ಮುಖಾಂತರ ಜನಸಾಮಾನ್ಯರ ಮೇಲೆ ಶಾಸನಗಳನ್ನು ಹೇರುತ್ತಿದ್ದಾರೆ.

   ಇವುಗಳಲ್ಲಿ ಮುಖ್ಯವಾಗಿ ಎ.ಪಿ.ಎಂ.ಸಿ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತು ಒಪ್ಪಂದ, ಅಗತ್ಯ ವಸ್ತುಗಳ ಕಾಯಿದೆ ಭೂಸುಧಾರಣ ಕಾಯ್ದೆ ಮುಂತಾದವುಗಳೂ ಮುಖ್ಯವಾಗಿ ರೈತ ವಿರೋಧಿ ಕಾಯ್ದೆಗಳಾಗಿವೆ. ಇನ್ನು ಭೂಸುಧಾರಣೆ ಕಾಯಿದೆಯಲ್ಲಿ ಯಾರು ಎಷ್ಟು ಬೇಕಾದರೂ ಜಮೀನು ಹೊಂದುವ ಕಾಯ್ದೆಯಂತು ಸಣ್ಣ ರೈತರ ನಿರ್ಣಾಮ ಮಾಡಲೆಂದೆ ಬಂದಿದೆ, ಇನ್ನು ಎ.ಪಿ.ಎಂ.ಸಿ ಕಾಯಿದೆ ರೈತರ ಶವಪೆಟ್ಟಿಗೆಯ ಕೊನೆಯ ಮೊಳೆಇದ್ದಂತೆ.

   ರೈತರು ತಾವು ಬೆಳೆಯುವ ಬೆಳೆಗೆ ಸೂಕ್ತವಾದ ಬೆಲೆಯನ್ನು ಕೇಳುವ ಒಂದೇ ಒಂದು ಸಂಸ್ಥೆಯಾಗಿದ್ದು ಇದನ್ನು ಮುಚ್ಚುತ್ತಿದ್ದು ಇನ್ನು ಭೂ ಸುದಾರಣೆ ಕಾಯ್ದೆಯು ಸಹ ಕಾರ್ಪೋರೆಟ್ ಸಂಸ್ಥೆಗೆ ರತ್ನಗಂಬಳಿ ಹಾಸಿದಂತೆಯಾಗಿದ್ದು ರೈತರ ತುಂಡು ಭೂಮಿಗಳನ್ನು ಕಿತ್ತುಕೊಳ್ಳಲು ಹೊರಟಿರುವುದು ಎಷ್ಟು ಸರಿ ಜಮೀನನ್ನು ಕಳೆದುಕೊಂಡ ರೈತರು ಎಲ್ಲಿ ಹೋಗಬೇಕು. ಕೊರೊನಾ ಲಾಕ್‍ಡೌನ್ ಜನರ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿದರೆ ರೈತರ ಮತ್ತು ಕೃಷಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ.

   ತಮ್ಮ ಬೆಳೆಗಳನ್ನು ಮಾರಲಾಗದೆ, ಮಾರಿದರೂ ಬೆಲೆಯಿಲ್ಲದೆ, ಕೂಲಿಯಿಲ್ಲದೆ, ತಿನ್ನುವ ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಲಾಕ್‍ಡೌನ್ ಕೊನೆಯಾಗುತ್ತಿದ್ದರೂ ಬವಣೆ ಕೊನೆಯಾಗುತ್ತಿಲ್ಲ. ಬದಲಿಗೆ ಉಲ್ಭಣವಾಗುತ್ತಿವೆ. ಇಂತಹ ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರ ಗಾಯಕ್ಕೆ ಉಪ್ಪು ಸವರಿದಂತೆ ರೈತ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಇದಕ್ಕಾಗಿ ಆಗಸ್ಟ್ 10 ರಂದು ಎ.ಪಿ.ಎಂ.ಸಿ ಆವರಣದಿಂದ ಉಪವಿಭಾಗಾಧಿಕಾರಿ ಕಛೇರಿಯವರೆಗೆ ಬೃಹತ್ ಕಾಲ್ನೆಡಿಗೆ ಜಾಥದಿಂದ ಎಚ್ಚರಿಸಲಾಗುವುದೆಂದು ತಿಳಿಸಿದರು.

    ಬೆಲೆ ಕಾವಲು ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ ವಿಶ್ವದ ಗಮನ ಸೆಳೆಯುವ ಕೊಬ್ಬರಿ ಕೇಂದ್ರವಾದ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆಯು ಕ್ವಿಂಟಾಲ್‍ಗೆ 8500 ರೂಗಳಷ್ಟು ಪಾತಾಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ರೈತ ಸಂಘಟನೆಗಳ ಒತ್ತಡದಿಂದಾಗಿ ಖರೀದಿ ಕೇಂದ್ರವನ್ನು ತೆರೆದಿದ್ದರೂ ಗುಣಮಟ್ಟದ ಕೊಬ್ಬರಿಗೆ ಕ್ವಿಂಟಾಲ್‍ಗೆ ಕೇವಲ ರೂ.10,300 ಕೇಂದ್ರದ ಬೆಂಬಲ ಬೆಲೆ ಮಾತ್ರ ಕೊಡುತ್ತಿರುವುದರಿಂದ ರೈತರಿಗೆ ಮಾರಾಟ ಮಾಡುವ ಆಸಕ್ತಿಯೇ ಇಲ್ಲ. ನಫೆಡ್‍ಗೆ ರೈತರು ಕೊಬ್ಬರಿ ಬಿಡಬೇಕೆಂದರೆ ರಾಜ್ಯ ಸರ್ಕಾರ ರೂ.5,000 ಸಹಾಯಧನ ನೀಡಿದರೆ ಮಾತ್ರ ಕೊಬ್ಬರಿ ಬೆಳೆಗಾರರು ಉಸಿರಾಡಬಹುದು. ಇನ್ನೂ ಕೊಬ್ಬರಿ ದರ ಕುಸಿದಾಗ ಯಾವುದೇ ಪ್ರತಿಭಟನೆ ವಿಫಲವಾಗಿಲ್ಲ ಆಗಸ್ಟ್ 10ರ ಒಳಗಾಗಿ ರಾಜ್ಯಸರ್ಕಾರ 10300ರೂ ಜೊತೆಗೆ 5000 ಹೆಚ್ಚುವರಿ ನೀಡದೇ ಹೋದರೆ ಪ್ರತಿಭಟನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

     ಹಸಿರು ಸೇನೆ ಅಧ್ಯಕ್ಷ ತಿಮ್ಮಲಾಪುರ ದೇವರಾಜು ಮಾತನಾಡಿ ಕೃಷಿ ಕೈಕೊಟ್ಟಾಗಲೆಲ್ಲಾ ರೈತರನ್ನು ಕಾಪಾಡಿರುವುದು ಹೈನುಗಾರಿಕೆ. ಕರ್ನಾಟಕದಲ್ಲಿ ಲಕ್ಷಾಂತರ ರೈತರು ಹಾಲು ಉತ್ಪಾದನೆಯ ಮೇಲೆ ಅವಲಂಬಿತರಾಗಿದ್ದಾರೆ. ಇದೀಗ ರೈತರಿಗೆ ಜೀವನೋಪಾಯದಲ್ಲಿ ಕೊನೆ ಗರಿಕೆ ಹುಲ್ಲಾದ ಹಾಲು ಖರೀದಿಯಲ್ಲೂ ದರ ಕಡಿಮೆ ಮಾಡಿ ಮತ್ತೊಂದು ಹೊಡೆತವನ್ನು ನೀಡಲಾಗಿದೆ.

    ಎ.ಪಿ.ಎಂ.ಸಿ ಪ್ರತಿನಿಧಿಗಳು ಜನರಿಂದ ಗೆದ್ದು ಸುಮ್ಮನೆ ಅಧಿಕಾರವನ್ನು ಅನುಭವಿಸುತ್ತಿದ್ದಾರೆಯೇ ಹೊರತು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಇಂತಹ ಜನಪ್ರತಿನಿಧಿಗಳಿಗೆ ಇದ್ದರು ಒಂದೇ ಇಲ್ಲದೇ ಹೋದರೂ ಒಂದೇ ಎಂದು ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್‍ಕೆಎಸ್), ಬೆಲೆ ಕಾವಲು ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಜನಸ್ಪಂದನ ಟ್ರಸ್ಟ್, ಸೌಹಾರ್ದ ತಿಪಟೂರು, ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ತಿಪಟೂರು, ಸಾವಯವ ಕೃಷಿ ಪರಿವಾರ, ಜಾಗೃತಿ ಸೇವಾ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ,
ಪತ್ರಿಕಾಗೋಷ್ಠಿಯಲ್ಲಿ ಸಿ.ಐ.ಟಿ.ಯುನ ಅಲ್ಲಾಬಕಾಷ್, ಚನ್ನಬಸವಣ್ಣ, ಬೆನ್ನಾಯಕನಹಳ್ಳಿ ದಯಾನಂದ್, ಅಣಪನಹಳ್ಳಿ ಗೋವಿಂದೇಗೌಡ ಮತ್ತಿರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link