ಎಸಿಬಿ ದಾಳಿ: ಕೋಟ್ಯಾಂತರ ರೂಪಾಯಿ ಆಸ್ತಿ ಪತ್ತೆ …!!!

ಬೆಂಗಳೂರು

         ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಮಂಗಳವಾರ ಮುಂಜಾನೆ ನಡೆಸಿದ ದಾಳಿಯಲ್ಲಿ ಬಲೆಗೆ ಬಿದ್ದಿರುವ ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕ ಸತೀಶ್ ಸೇರಿ ನಾಲ್ವರು ಭ್ರಷ್ಟ ಅಧಿಕಾರಿಗಳ ಬಳಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ.

         ಬಲೆಗೆ ಬಿದ್ದಿರುವ ಅಧಿಕಾರಿಗಳಿಗೆ ಸೇರಿದ 10 ಕಡೆಗಳಲ್ಲಿ ದಾಳಿ ನಡೆಸಿದ್ದು ಮಂಗಳವಾರ ಸಂಜೆವರಗೆ ವಶಪಡಿಸಿಕೊಂಡ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಬೆಚ್ಚಿ ಬೀಳುವಷ್ಟು ಚಿನ್ನ ಬೆಳ್ಳಿ ಐಷಾರಾಮಿ ವಸ್ತುಗಳು ನಿವೇಶನ ಕೃಷಿ ಭೂಮಿಯ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಗಿದೆ

         ಅಪರ ನಿಬಂಧಕ ಸತೀಶ್ ಅವರ ಬಳಿ ಬರೋಬ್ಬರಿ 1 ಕೆಜಿ ಚಿನ್ನ, 20 ಕೆಜಿ 900 ಗ್ರಾಂ ಬೆಳ್ಳಿ ಬಸವೇಶ್ವರ ನಗರದಲ್ಲಿ ಮನೆ, 2 ನಿವೇಶನ, .1 ಕಾರು, ಬ್ಯಾಂಕ್ ಖಾತೆಗಳಲ್ಲಿ 3.84 ಲಕ್ಷ ರೂ. ನಗದು, 34 ಲಕ್ಷ 16 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು, ಬ್ಯಾಂಕ್‍ನ ಲಾಕರ್‍ವೊಂದನ್ನು ಪರಿಶೀಲಿಸಬೇಕಾಗಿದೆ ಎಂದು ಎಸಿಬಿಯ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.

42.66 ಲಕ್ಷ ಪತ್ತೆ

       ವಿಜಯಪುರದ ಗ್ರಾಮೀಣ ಮೂಲಭೂತ ಸೌಕರ್ಯಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್) ಉಪ ನಿರ್ದೇಶಕ ಶರದ್ ಗಂಗಪ್ಪ ಇಜ್ರಿ ಅವರ ಬಳಿ 2 ಮನೆ, 1 ಫ್ಲಾಟ್, 32 ಎಕರೆ 24 ಗುಂಟೆ ಕೃಷಿ ಜಮೀನು, 675 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ, 3 ಕಾರುಗಳು, 3 ದ್ವಿಚಕ್ರ ವಾಹನ, 42 ಲಕ್ಷ 62 ಸಾವಿರ ನಗದು, ಬ್ಯಾಂಕ್ ಖಾತೆಗಳಲ್ಲಿ 6 ಲಕ್ಷ 3 ಸಾವಿರ ನಗದು, 6 ಲಕ್ಷ 37 ಸಾವಿರ ವಿಮೆ ಪಾಲಿಸಿಗಳು. 1 ಲಾಕರ್ ಪತ್ತೆಯಾಗಿದೆ.

         ಮಂಡರಗಿಯ ಕೃಷಿ ಅಧಿಕಾರಿ ಪ್ರಕಾಶ್ ಗೌಡ ಕುದ್ರಿಮೋಟಿ ಅವರ ಮಂಡರಗಿಯಲ್ಲಿನ 2 ಮನೆ, 3 ನಿವೇಶನ, ಕುಕ್ಕನೂರಿನಲ್ಲಿ 5 ಎಕರೆ, ಅರಳಾಪುರದಲ್ಲಿ 4.29 ಎಕರೆ,ಹಳ್ಳಿಗುಡ್ಡಿಯಲ್ಲಿ 7.31 ಎಕರೆ ಕೃಷಿಭೂಮಿ ಅಲ್ಲದೆ 570 ಗ್ರಾಂ ಚಿನ್ನ, 2 ಕೆಜಿ 290 ಗ್ರಾಂ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನ ಪತ್ತೆಯಾಗಿದೆ.

ವಾಣಿಜ್ಯ ಸಂಕೀರ್ಣ

         ಬಿಬಿಎಂಪಿಯ ಜೆಪಿನಗರದ ಉಪವಿಭಾಗದ ಸಹಾಯಕ ಕಂದಾಯಾಧಿಕಾರಿ ಮಂಜುನಾಥ್, ಚೆನ್ನರಾಯಪಟ್ಟಣದ ಬಿಎಂ ರಸ್ತೆಯಲ್ಲಿ ಮನೆಯೊಂದಿಗೆ ವಾಣಿಜ್ಯ ಸಂಕೀರ್ಣ ಹೊಂದಿರುವುದು, ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 4 ನಿವೇಶನ, ಹಾಸನದಲ್ಲಿ 13 ಗುಂಟೆ ಜಮೀನು, 450 ಗ್ರಾಂ ಚಿನ್ನ, 1 ಕೆಜಿ 230 ಗ್ರಾಂ ಬೆಳ್ಳಿ, ಕಾರು, ದ್ವಿಚಕ್ರ ವಾಹನ, 4 ಲಕ್ಷ 26 ಸಾವಿರ ನಗದು, 19 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

       ಈ ನಾಲ್ವರು ಅಧಿಕಾರಿಗಳು ನಿನ್ನೆ ಮುಂಜಾನೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದು, ಒಟ್ಟು 10 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link