ಬೆಂಗಳೂರು
ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿ ಕೆರೆಕೋಡಿ ಬಳಿಯ ಡೆಕೋರೇಷನ್ ಗೋದಾಮಿಗೆ ಅಕಸ್ಮಿಕ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ.
ಹೊಸಕೆರೆಹಳ್ಳಿ ಕೆರೆಕೋಡಿ ಬಳಿಯ ದಿ.ಲೆಗೆಸಿ ಕಲ್ಯಾಣಮಂಟಪದ ಮುಂಭಾಗದ ಗೋದಾಮಿನಲ್ಲಿ ರಾತ್ರಿ 11.10ರ ವೇಳೆ ಬೆಂಕಿ ಅವಘಡ ಉಂಟಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಇಡೀ ಗೋದಾಮು ಆವರಿಸಿದ್ದು ಗೋದಾಮಿನಿಂದ ಬೆಂಕಿ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಒಂದರಿಂದ ಒಂದರಂತೆ 10 ಆಗ್ನಿಶಾಮಕ ವಾಹನಗಳು ಧಾವಿಸಿ ಇಂದು ಬೆಳಿಗ್ಗೆವರಗೆ ಶ್ರಮಿಸಿ ಬೆಂಕಿ ನಂದಿಸಿವೆ.
ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ್ದು ಗೋದಾಮಿನಲ್ಲಿ ಶೇಖರಿಸಿದ್ದ ಶಾಮಿಯಾನದ ಬಟ್ಟೆಗಳು ಮರದ ಕಂಬಗಳು ಇನ್ನಿತರ ಅಲಂಕಾರಿಕ ವಸ್ತುಗಳನ್ನು ಶೇಖರಣೆ ಮಾಡಿದ್ದು ಅವುಗಳೆಲ್ಲೂ ಸುಟ್ಟು ಭಸ್ಮವಾಗಿ ಕೋಟ್ಯಾಂತರ ರೂಗಳ ನಷ್ಟ ಸಂಭವಿಸಿದೆ.ಗೋದಾಮಿನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಮಿತ್ ಎಂಬವರಿಗೆ ಸೇರಿದ್ದ ಶಾಮಿಯಾನ ಮತ್ತು ಡೆಕೊರೇಟ್ ಸೆಟ್ ಗೋದಾಮು ಇದಾಗಿದ್ದು,ಪ್ರೀನ್ಸಸ್ ಗಾಲ್ಫ್ ಮಾಲೀಕತ್ವದ ಶಾಮಿಯಾನ ಸೆಟ್ ಗೋಡಾನ್ ನವರು ನಗರದ ಪ್ಯಾಲೆಸ್ ಗ್ರೌಂಡ್ ನಲ್ಲಿ ಮದುವೆ ಸಮಾರಂಭಕ್ಕೆ ಶಾಮಿಯಾನ ಸೆಟ್ ಹಾಕುತ್ತಿದ್ದರು.
ಈ ಹಿಂದೆ ಇದೇ ಗೋಡಾನ್‍ನಲ್ಲಿ ಟಗರು ಸಿನೆಮಾ ಶೂಟ್ ಸಹ ಮಾಡಲಾಗಿತ್ತು.ಬೆಂಕಿಯ ಕಿಡಿಗೆ 10ಕ್ಕು ಹೆಚ್ಚು ಸಿಲಿಂಡರ್ ಗಳು ಸ್ಫೋಟದಿಂದ ಕೋಟ್ಯಂತರ ಮೌಲ್ಯದ ಸೆಟ್ ಗಳು ಬೆಂಕಿಗಾಹುತಿಯಾಗಿವೆ.ಸತತ ಮೂರು ಗಂಟೆಗಳಿಂದ ಹೊತ್ತಿ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಸುತ್ತ ಮುತ್ತಲಿನ ಅಪಾರ್ಟ್ ಮೆಂಟ್ ಜನ ಆತಂಕಕ್ಕೆ ಓಳಗಾಗಿದ್ದಾರೆ . ಸ್ಥಳಕ್ಕಾಗಮಿಸಿದ ರಾಜರಾಜೇಶ್ವರಿ ನಗರ ಪೊಲೀಸರು ಘಟನೆಯ ಕಾರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








