ಡಿ.17ಕ್ಕೆ ಕ್ರಷರ್ ಮಾಲೀಕರ ಪ್ರತಿಭಟನೆ

ಚಿತ್ರದುರ್ಗ:

         ಕ್ರಷರ್ ಪರವಾನಿಗಿಯನ್ನು ಕೆ.ಎಸ್.ಪಿ.ಸಿ.ಬಿ. ಗೆ ವಹಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ವತಿಯಿಂದ ಬೆಳಗಾವಿಯ ಸುವರ್ಣಸೌಧದ ಎದುರು ಡಿ.17 ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಐದು ಬಸ್‍ಗಳಲ್ಲಿ 16 ರಂದು ರಾತ್ರಿ ಹೊರಡಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಕ್ರಷರ್ ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.

        ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಕ್ರಷರ್ ಸಿ.ಫಾರಂನ್ನು 20 ವರ್ಷಗಳ ಅವಧಿಗೆ ವಿಸ್ತರಣೆ ಮಾಡಬೇಕು. ನಂತರ ಕೆ.ಸಿ.ಪಿ.ಸಿ.ಬಿ.ಯವರಿಂದ ನವೀಕರಣ ಮಾಡಿಕೊಡಬೇಕು.
ಕಟ್ಟಡದ ಕಲ್ಲನ್ನು ಮೈನರ್ ಮಿನರಲ್ಸ್‍ನಿಂದ ತೆಗೆದು ಎಸೆನ್ಷಿಯಲ್ ಕಮಾಡಿಟಿ ಕೆಳಗೆ ತರಬೇಕು.

        ಕಲ್ಲು ಗಣಿ ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ವಿಸ್ತರಿಸಬೇಕು.ಹತ್ತು ಹೆಕ್ಟೆರ್‍ವರೆಗೆ ಕಲ್ಲು ಗಣಿ ಗುತ್ತಿಗೆಗೆ ಇಸಿಯನ್ನು ತೆಗೆದು ಹಾಕಬೇಕು .ಕಟ್ಟಡದ ಕಲ್ಲಿಗೆ ಎಂ.ಡಿ.ಪಿ.ಯನ್ನು ತೆಗೆದು ರಾಜಧನವನ್ನು ಕೊನೆಯ ಬಳಕೆದಾರರಿಂದ ಪಡೆಯಬೇಕು.

         ಪಟ್ಟಾ ಲ್ಯಾಂಡ್‍ಗಳಿಗೆ ಡೀಮ್ಡ್ ಎನ್.ಎ.ಸರಿಯಾಗಿ ಕಾರ್ಯಗತವಾಗುತ್ತಿಲ್ಲ. ಆದ್ದರಿಂದ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಸರ್ಫೆಸ್ ರೆಂಟ್ ಕಟ್ಟಿಸಿಕೊಂಡು ಪರವಾನಿಗೆ ನೀಡಬೇಕು. ಈಗಾಗಲೆ ಸಲ್ಲಿಸಿರುವ ಕಟ್ಟಡ ಕಲ್ಲು ಗಣಿ ಗುತ್ತಿಗೆಗಳ ಮತ್ತು ಎಂ.ಸ್ಯಾಂಡ್ ಅರ್ಜಿಗಳನ್ನು ಪುರಸ್ಕರಿಸಬೇಕು. ನೆರೆ ರಾಜ್ಯಗಳಂತೆ ಡಿ.ಎಂ.ಎಫ್.ನ್ನು ಶೇ. 10 ಕ್ಕೆ ಇಳಿಸಬೇಕು.

      ಹರಾಜಿನಲ್ಲಿ ಕ್ವಾರಿ ಪಡೆದವರನ್ನು ಹೊರತುಪಡಿಸಿ ಎಎಪಿಪಿ ಯನ್ನು ರದ್ದುಗೊಳಿಸಿ ಎಲ್ಲರಿಗೂ ಸಮಾನವಾದ ರಾಜಧನವನ್ನು ನಿಗಧಿಗೊಳಿಸುವುದು ಸೇರಿದಂತೆ ಇನ್ನು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾವಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು

       ಜಿಲ್ಲಾ ಕ್ರಷರ್ ಕ್ವಾರಿ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ಬಿ.ಶೇಖರ್, ಖಜಾಂಚಿ ಜಿ.ಸಿ.ಸುರೇಶ್‍ಬಾಬು, ನಗರಸಭೆ ಸದಸ್ಯ ವೆಂಕಟೇಶ್, ಗಂಗಾಧರಸ್ವಾಮಿ, ಆನಂದ ಸಭೆಯಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap