ಹೋಟೆಲ್ ಕಳ್ಳತನ :ಆರೋಪಿ ಬಂಧನ

ಚಳ್ಳಕೆರೆ

   ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಅರಮನೆ ಹೋಟೆಲ್‍ನ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳ ಸುಮಾರು 60 ಸಾವಿರ ಹಣವನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಮಾಲೀಕರ ಸೂಚನೆಯಂತೆ ಹೋಟೆಲ್‍ನ ಕ್ಯಾಷಿಯರ್ ದಿಲೀಪ್‍ಕುಮಾರ್ ಪೊಲೀಸರಿಗೆ ದೂರು ನೀಡಿರುತ್ತಾರೆ.

    ದೂರನ್ನು ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ರಕ್ಷಣಾಧಿಕಾರಿ ಮಹಲಿಂಗನಂದಗಾವಿ, ಉಪವಿಭಾಗದ ಡಿವೈಎಸ್ಪಿ ಕೆ.ವಿ.ಶ್ರೀಧರ್, ವೃತ್ತ ನಿರೀಕ್ಷಕ ನಲವಾಗಲು ಮಂಜುನಾಥ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಮತ್ತು ಸಿಬ್ಬಂದಿ ವರ್ಗ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹೋಟೆಲ್ ಹಿಂಭಾಗದ ಸಿಸಿ ಕ್ಯಾಮರದ ಮೂಲಕ ಪತ್ತೆಹಚ್ಚಿ ಆತನಿಂದ 36.700 ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.

    ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ಗಾರೆಕೆಲಸಗಾರ ನವೀನ್ ಎಂಬಾತನೆ ಈ ಕೃತ್ಯ ನಡೆಸಿದ್ದು, ಕೂಡಲೇ ಇವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡ ಈತ ಸ್ವಲ್ಪಭಾಗ ನಗದು ಹಣವನ್ನು ಮಾತ್ರ ಪೊಲೀಸರಿಗೆ ನೀಡಿರುತ್ತಾರೆ. ಮಲ್ಲಿಕಾರ್ಜುನ, ಶಿವಾನಂದ, ಮಹಂತೇಶ್, ಮಂಜುನಾಥ ಮುಡಕೆ, ಚಂದ್ರನಾಯ್ಕ, ಶಿವಾನಂದಮಡಿವಾಳ, ವಿಶಾಲ್ ಮುಂತಾದವರ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap