ಕಲಾ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿ

ದಾವಣಗೆರೆ:

         ಮಕ್ಕಳಲ್ಲಿ ಹುದುಗಿರುವ ಕಲಾ ಪ್ರತಿಭೆ ಅನಾವರಣಕ್ಕೆ ಶಿಕ್ಷಣ ಸಂಸ್ಥೆಗಳು ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರ ಸರ್ವತೋಮುಖ ಬೆಳವೆಣಿಗೆಗೆ ಸಹಕರಿಸಬೇಕೆಂದು ರಾಮಕೃಷ್ಣ ಮಿಷನ್‍ನ ಕಾರ್ಯದರ್ಶಿ ಶ್ರೀಸ್ವಾಮಿ ನಿತ್ಯಾಸ್ಥನಂದಜೀ ಮಹಾರಾಜ್ ಸಲಹೆ ನೀಡಿದರು.

        ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಸಂಸ್ಕøತಿ ವಿದ್ಯಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ 5ನೇ ವರ್ಷದ ಕಲಾ ಕಲ್ಪ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಅಂತರಂಗದಲ್ಲಿ ಹುದುಗಿರುವ ಕಲಾ ಶಕ್ತಿ ಸಾಮಥ್ರ್ಯವನ್ನು ಪ್ರದರ್ಶಿಸಲು ಶಿಕ್ಷಣ ಸಂಸ್ಥೆಗಳು ಸೂಕ್ತ ಅವಕಾಶ ಕಲ್ಪಿಸಬೇಕಾಗಿದೆ ಎಂದು ಹೇಳಿದರು.

        ಹಿಂದೆ ವಿದ್ಯಾರ್ಥಿಗಳು ಜ್ಞಾನವನ್ನು ಅರಿಸಿಕೊಂಡು ಹೋಗುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಜ್ಞಾನದ ಬದಲು ಕೇವಲ ಹಣ ಸಂಪಾದನೆ ಮತ್ತು ಉದ್ಯೋಗಕ್ಕಾಗಿ ಶಾಲೆಗೆ ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

         ಪೋಷಕರು ಮಕ್ಕಳನ್ನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ, ಅಂಕವಾದಿಗಳನ್ನಾಗಿ ಮಾಡುತ್ತಿದ್ದಾರೆ. ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡದೇ, ಪ್ರತಿಭೆಯನ್ನು ಅದಿಮಿಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಅದನ್ನು ಅನಾವರಣಗೊಳಿಸಲು ಸಾಧ್ಯವಾಗದ ಮಕ್ಕಳು ಪ್ರಾಣಿಗೆ ಸಮಾನವಾಗಲಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ನಾಟಕ ಸೇರಿದಂತೆ ಇತರೆ ಕಲಾ ಪ್ರತಿಭೆಗೂ ಆದ್ಯತೆ ನೀಡಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

          ಜೀವನದಲ್ಲಿ ಕಲೆಯು ಮಾನಸಿಕ ಆರೋಗ್ಯದ ಜೊತೆಗೆ ನಿಜವಾದ ಸಾರ್ಥಕತೆಯನ್ನು ಪಡೆಯುವಂತೆ ಮಾಡಲಿದೆ. ಸುಖವನ್ನು ಸಾರ್ಥಕತೆಯಲ್ಲಿ ಕಂಡಾಗ ಮಾತ್ರ ಮನುಷ್ಯತ್ವ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಮಾನಸಿಕವಾಗಿ ಅಭಿವ್ಯಕ್ತಿ ಗೊಳಿಸಲು ಅವಕಾಶ ಸಿಕ್ಕಿಲ್ಲ ಎಂದಾದಾಗ ವ್ಯಕ್ತಿ ಬೆಳವಣಿಗೆ ಆಗುವುದು ಕಷ್ಟಸಾಧ್ಯ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಪ್ರತಿಭೆ ಅನಾವರಣಗೊಳ್ಳುವುದು ಸಾಧ್ಯವಿಲ್ಲ. ಮಕ್ಕಳಿಗೆ ಜ್ಞಾನದ ಬೆಳವಣಿಗೆಗಿಂತ (ಐಕ್ಯೂ), ಭಾವನಾತ್ಮಕ ಬೆಳವಣಿಗೆ (ಇಕ್ಯೂ) ಅತೀಮುಖ್ಯವಾಗಿದ್ದು, ಮಕ್ಕಳಲ್ಲಿ ಭಾವನೆಗಳೇ ಇಲ್ಲದಿದ್ದರೇ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದರು.

           ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್.ಜಯಂತ್ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು ಸಮಾಜಕ್ಕೆ ಕೊಡುಗೆಯಾಗಿ ಅಮರ್ಪಿಸುವಾಗ ಕೇವಲ ಪುಸ್ತಕದ ಬದನೆಕಾಯಿ ಆಗಿಸದೇ, ಕೌಶಲ್ಯ ಸಹ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ವೇದಿಕೆ ಎದುರಿಸುವ ಸಾಮಥ್ರ್ಯ, ಸಂವಹನ ಕೌಶಲ್ಯ, ಡ್ರಾಯಿಂಗ್, ಪೇಂಟಿಂಗ್, ನೃತ್ಯ, ಹಾಡು, ಭರತನಾಟ್ಯ, ರಂಗೋಲಿ ಸೇರಿದಂತೆ ಬಹು ಕೌಶಲ್ಯಗಳನ್ನು ಕಲಿಸಬೇಕು. ಆಗ ಬದುಕಿನಲ್ಲಿ ಬರುವ ಸಮಸ್ಯೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸ್ವಸಾಮಥ್ರ್ಯ ಬರಲಿದೆ. ಮಕ್ಕಳನ್ನು ಓದಿಗೆ ಸೀಮಿತಗೊಳಿಸುವ ಸಂಕುಚಿತ ಭಾವನೆಯಿಂದ ಪೋಷಕರು ಹೊರ ಬಂದು, ಎಲ್ಲಾ ರಂಗಗಳಲ್ಲೂ ಪ್ರತಿಭೆ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

            ಸಾನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲಾಕಲ್ಪ ಸಂಸ್ಥೆಯು ಮಕ್ಕಳಲ್ಲಿ ಬಹುಮುಖ ವ್ಯಕ್ತಿತ್ವದ ಕಲೆಯ ಜೊತೆಗೆ ವಿವಿಧತೆಯಲ್ಲಿ ಏಕತೆಯನ್ನು ಕಲಿಸಲು ಸೂಕ್ತ ವೇದಿಕೆ ಕಲ್ಪಿಸಿದೆ. ಮಕ್ಕಳು ವಿದ್ಯೆ ಹಾಗೂ ವಿನಯದ ಜೊತೆಗೆ ಪ್ರತಿಭೆ ಹೊಂದಿದಾಗ ಮಾತ್ರ ಎಲ್ಲೆಡೆಯೂ ಗೌರವಕ್ಕೆ ಅರ್ಹರಾಗಲಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ರಂಗ ನಿರ್ದೇಶಕ ರವೀಂದ್ರ ಎಚ್.ಅರಳಗುಪ್ಪಿ ಅವರಿಗೆ ಕಲಾಕಲ್ಪ ಪ್ರಶಸ್ತಿ, ಹೊಸದುರ್ಗದ ಸಂಗೀತ ಮತ್ತು ವೀಣೆ ವಿದ್ವಾಂಸ ವಿದ್ವಾನ್ ಈಶ್ವರಪ್ಪ ಅವರಿಗೆ ಗುರುವಂದನೆ ಹಾಗೂ ಶ್ರೀಮತಿ ಗೀತಾ ಪ್ರಭಾಕರ್ ಮತ್ತು ಎಮ್.ಎಸ್. ಪ್ರಭಾಕರ್ ಅವರಿಗೆ ಮಾತ ಪಿತೃ ವಂದನೆ ಸಲ್ಲಿಸಿ ಗೌರವಿಸಲಾಯಿತು.

            ಸಂಸ್ಕತಿ ಪ್ರತಿಷ್ಠಾನದ ಐನಹಳ್ಳಿ ವಿಶ್ವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲತಿಕಾ ದಿನೇಶ್ ಕೆ. ಶೆಟ್ಟಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ನಿರ್ದೇಶಕಿ ಶುಭ ಐನಹಳ್ಳಿ ವಿಶ್ವಪ್ರಕಾಶ್ ಸ್ವಾಗತಿಸಿದರು. ವಿವೇಕ್ ಎಂ.ಪಿ. ಪ್ರಾಸ್ತಾವಿಕ ನುಡಿದರು, ಸ್ವರೂಪ ಬದ್ರಿನಾಥ್ ವಾರ್ಷಿಕ ವರದಿ ವಾಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap