ಬೆಂಗಳೂರು:
ಉಪ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳ ಬಾಕಿ ಇರುವಾಗ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಜೆಡಿಎಸ್ ನಾಯಕ ಜಿ. ಟಿ. ದೇವೇಗೌಡ ಅವರನ್ನು ಅವರ ಮೈಸೂರಿನ ವಿಜಯಬಗರದ ಮನೆಯಲ್ಲಿ ಭೇಟಿ ಮಾಡಿ ಜಿಟಿಡಿ ಅವರಿಗೆ ಶುಭ ಹಾರೈಸಿದರು.
ಹುಣಸೂರು, ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ನಡೆದ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಒಂದು ರೀತಿಯ ಅನುಮಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ.ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರ ಹುಟ್ಟುಹಬ್ಬವಿದ್ದ ಕಾರಣ ರಾಮುಲು ಅವರನ್ನು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದ್ದಾರೆ.
![](https://prajapragathi.com/wp-content/uploads/2019/11/BJP-leader-Sriramulu.gif)