ನವದೆಹಲಿ:
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾಗ ಕೆಲವು ಗೊಂದಲಗಳಿದ್ದು ಅದಕ್ಕಲ್ಲಾ ಕೇಂದ್ರ ಸ್ಪಷ್ಟನೆ ನೀಡಿದೆ. ಸಲೂನ್ ಗಳು, ಪಾರ್ಲರ್ಗಳು ಮತ್ತು ಕ್ಷೌರಿದ ಅಂಗಡಿ (ಕಟಿಂಗ್ ಶಾಪ್) ಗಳಿಗೆ ಕೆಲಸ ಮಾಡಲು ಈ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಅದು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
ಹೊಸ ಮಾರ್ಗಸೂಚಿಗೆ ನೀಡಿದ ಸ್ಪಷ್ಟನೆಯಲ್ಲಿ ಸರ್ಕಾರ “ಹೇರ್ ಸಲೊನ್ಸ್ ಮತ್ತು ಕಟಿಂಗ್ ಶಾಪ್ ಗಳು ಮೇ 3ರವರೆಗೆ ತೆರೆಯುವಂತಿಲ್ಲಾ. ಆದೇಶವು ವಸ್ತು ಮಾರಾಟ ನಡೆಸುವ ಅಂಗಡಿಗಳಿಗಷ್ಟೇ ಅನ್ವಯವಾಗಲಿದೆ. ಕಟಿಂಗ್ ಶಾಪ್ ಹಾಗೂ ಹೇರ್ ಸಲೂನ್ಗಳನ್ನು ತೆರೆಯಲು ಯಾವುದೇ ಅನುಮತಿಯಿಲ್ಲ.ಅಂತೆಯೇ ಮದ್ಯದಂಗಡಿಗಳನ್ನು ತೆರೆಯಲು ಸಹ ಅನುಮತಿಯಿಲ್ಲ” ಎಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Hair-Cut-for-Kids.gif)