ಬೆಂಗಳೂರು
ಫೇಸ್‍ಬುಕ್, ವಾಟ್ಸ್ಯಾಪ್, ಆನ್‍ಲೈನ್‍ನಲ್ಲಿ ಬರುತ್ತಿದ್ದ ವಂಚನೆಯ ದೂರುಗಳು ಸಾಮಾನ್ಯವಾಗಿದ್ದವು ಆದರೆ ಆ್ಯಪ್ ಮೂಲಕ ಖಾತೆಯನ್ನು ಹ್ಯಾಕ್ ಮಾಡಿ ಹಣ ದೋಚುವ ಜಾಲವೊಂದು ನಗರದಲ್ಲಿ ಕಂಡುಬಂದಿದ್ದು ಆನ್‍ಲೈನ್ ವಂಚಕರ ಪತ್ತೆಗೆ ಸೈಬರ್ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ
ಅಕೌಂಟ್‍ನಲ್ಲಿ ತಮಗೆ ತಿಳಿಯದ ಹಾಗೆ ಹಣ ಡ್ರಾ ಆಗಿದೆ. ವಾಟ್ಸ್ಯಾಪ್ ಅಕೌಂಟ್, ಫೇಸ್‍ಬುಕ್ ಹ್ಯಾಕ್ ಆಗಿದೆ ಎಂಬ ಮೂವತ್ತಕ್ಕೂ ಹೆಚ್ಚು ದೂರುಗಳು ಬಂದ ಹಿನ್ನೆಲೆ ಪೆÇಲೀಸರು ತನಿಖೆ ಕೈಗೊಂಡಾಗ ಈ ಜಾಲ ಪತ್ತೆಯಾಗಿದೆ.ವಾಣಿಜ್ಯ ಉಪಯೋಗಕ್ಕೆ ಎಂದು ತಯಾರಿಸಿದ್ದ ಎನಿಡೆಸ್ಕ್ ಆ್ಯಪ್‍ನ್ನು ಉಪಯೋಗಿಸಿಕೊಂಡು ಕುಳಿತ ಜಾಗದಿಂದಲೇ ಇತರರ ಖಾತೆಯನ್ನು ಹ್ಯಾಕ್ ಮಾಡಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೇ ಅಕೌಂಟ್‍ನ್ನು ಹ್ಯಾಕ್ ಮಾಡಲು ಅಥವಾ ಹಣ ದೋಚಲು ಮೊಬೈಲ್‍ಗೆ ಬರುವ ಒಟಿಪಿ ನಂಬರ್ ಪ್ರಮುಖವಾಗುತ್ತದೆ. ಆದರೆ, ಈ ಜಾಲದಲ್ಲಿ ಒಟಿಪಿ ನಂಬರ್‍ನ್ನು ಕೂಡ ಆ್ಯಪ್ ಮುಖಾಂತರವೇ ಪಡೆದು ಹಣ ದೋಚುತ್ತಿದ್ದಾರೆ.ಜಾಲದ ಪತ್ತೆಗೆ ಪೆÇಲೀಸರು ಹರಸಾಹಸ ಪಡುತ್ತಿದ್ದು, ಈ ಸಂಬಂಧ ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
