ಬೆಂಗಳೂರು
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಡಿ.5 ರಿಂದ ಐದು ದಿನಗಳ ಕಾಲ ಮಹಿಳಾ ಪೊಲೀಸ್ ಸೈಕಲ್ ಯಾತ್ರೆಯನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ.
ಮಾನಸಿಕವಾಗಿ, ದೈಹಿಕವಾಗಿ, ಸದೃಢಗೊಳಿಸಿ ಸಬಲೀಕರಣದ ಜಾಗೃತಿ ಮೂಡಿಸಲು ಮಹಿಳಾ ಪೊಲೀಸ್ ಸೈಕಲ್ ಯಾತ್ರೆಯನ್ನು ಬೆಳಗಾವಿಯಿಂದ ಬೆಂಗಳೂರಿನವರೆಗೆ ಆಯೋಜಿಸಲಾಗಿದೆ.
ಯಾತ್ರೆಯಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳು, 11 ಮಹಿಳಾ ಪೊಲೀಸ್ ಅಧಿಕಾರಿಗಳು, 40 ಮಂದಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು 45 ಮಹಿಳಾ ಪೆÇಲೀಸ್ ಕಾನ್ಸ್ಟೇಬಲ್‍ಗಳುಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಮೀಸಲು ಪಡೆ(ಕೆಎಸ್‍ಆರ್‍ಪಿ)ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಭಾಸ್ಕರ್ ರಾವ್ ತಿಳಿಸಿದರು.
ಡಿ. 5 ರಂದು ಬೆಳಗಾವಿಯಿಂದ ಆರಂಭವಾಗುವ ಸೈಕಲ್ ಡಿ. 9ಕ್ಕೆ ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ. ಡಿ. 5 ರಂದು ಬೆಳಗಾವಿಯಿಂದ ಹುಬ್ಬಳ್ಳಿ ಯವರೆಗೆ, ಡಿ. 6 ರಂದು ಹುಬ್ಬಳ್ಳಿಯಿಂದ ರಾಣೆ ಬೆನ್ನೂರು ವರೆಗೆ, ಡಿ. 7 ರಂದು ರಾಣೆ ಬೆನ್ನೂರಿನಿಂದ ಚಿತ್ರದುರ್ಗದವರೆಗೆ, ಡಿ. 8 ರಂದು ಚಿತ್ರದುರ್ಗದಿಂದ ತುಮಕೂರುವರೆಗೆ ಹಾಗೂ ಡಿ. 9 ರಂದು ತುಮಕೂರಿನಿಂದ ಬೆಂಗಳೂರು ವರೆಗೆ ತೆರಳಲಿದೆ.
ಸುಮಾರು 540 ಕಿಲೋ ಮೀಟರ್ ದೂರ ಕ್ರಮಿಸಲಿರುವ ಜಾಥಾ 5 ದಿನ ನಡೆಯಲಿದ್ದು, ಪ್ರತಿದಿನ 100 ಕಿಲೋ ಮೀಟರ್ ತೆರಳಲಿದ್ದಾರೆ ಎಂದ ಅವರು ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸಬಲವಾಗುವುದರ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ನೀಡಿದಂತಾಗುತ್ತದೆ.
ನಗರದ ಪರಿಸರ ವಾತಾವರಣ ಹಾಗೂ ವಿವಿಧ ಕ್ಷೇತ್ರಗಳ ಪರಿಚಯ ಈ ಸೈಕಲ್ ಜಾಥಾದಿಂದ ಲಭ್ಯವಾಗಲಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕೆಂಬ ಆಶಯ ಪೊಲೀಸ್ ಇಲಾಖೆಯದಾಗಿದೆ ಎಂದು ಹೇಳಿದರು.
ಸುದ್ಧಿ ಗೋಷ್ಠಿಯಲ್ಲಿ ಕೆ.ಎಸ್.ಆರ್.ಪಿ. ಡಿಐಜಿಪಿ ಸತೀಶ್ ಕುಮಾರ್, ಐಪಿಎಸ್ ಅಧಿಕಾರಿ ಕುಲ್ ದೀಪ್ ಕುಮಾರ ಜೈನ್, ಐಪಿಎಸ್ ಅಧಿಕಾರಿ ಲಕ್ಷ್ಮೀ ಪ್ರಸಾದ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
