ತಿಪಟೂರು
ತಾಲ್ಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ನಡೆಯುತ್ತಿರುವ ಶ್ರೀ ಕರಿಬಸವ ಸ್ವಾಮೀಜಿಗಳ 227ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಶ್ರೀ ಮಠದ 19ನೇ ಗುರುಗಳಾದ ಶ್ರೀ ಮ.ನಿ.ಪ್ರ. ಕರಿಬಸವ ದೇಶಿಕೆಂದ್ರ ಮಹಾಸ್ವಾಮಿಗಳ 12ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‍ರೊಂದಿಗೆ ಮಾಜಿ ಶಾಸಕ ಕೆ.ಷಡಕ್ಷರಿ ಭಾಗವಹಿಸಿ, ಶ್ರೀ ಕರಿಬಸವ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ (ಅಣ್ಣಯ್ಯ), ತಾ.ಪಂ ಉಪಾಧ್ಯಕ್ಷ ಎನ್.ಶಂಕರ್, ತಾ.ಪಂ ಸದಸ್ಯ ಎನ್.ಎಂ.ಸುರೇಶ್, ಕೆ.ಪಿ.ಸಿ.ಸಿ ಹಾಗೂ ನಗರಸಭಾ ಸದಸ್ಯ ಯೋಗೀಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








