ಹುಳಿಯಾರು:
ಹುಳಿಯಾರು ಹೋಬಳಿಯ ದಬ್ಬಗುಂಟೆ ಗ್ರಾಮದ ನಿವಾಸಿ ಡಿ.ಕೆ.ಮಹಾಲಿಂಗಯ್ಯ ಅವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಫಿಯಾರ್ ಕೂಟ ಏರ್ಪಡಿಸುವ ಮೂಲಕ ಬಾವೈಕ್ಯತೆ ಮೆರೆದಿದ್ದಾರೆ.
ಮುಸ್ಲಿಂ ಬಾಂಧವರಿಗಾಗಿ ಇಫ್ತಿಯಾರ್ ಕೂಟವನ್ನು ಏರ್ಪಡಿಸಿ ಅವರೊಂದಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ, ಸಾಮೂಹಿಕ ಭೋಜನವನ್ನು ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ದಬ್ಬಗುಂಟೆ ಗ್ರಾಮದ ನೂರಾರು ವರ್ಷಗಳಿಂದ ಮುಸ್ಲಿಂ ಬಾಂಧವರು ವಾಸಮಾಡುತ್ತಿದ್ದು ಸಾಮರಸ್ಯದಿಂದ ಬಾಳುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಂಮರಲ್ಲಿನ ಸಹಭಾತೃತ್ವವನ್ನು ಗಟ್ಟಿಗೊಳಿಸಲು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಇಫ್ತಿಯಾರ್ ಕೂಟ ಏರ್ಪಡಿಸುತ್ತಿರುವುದಾಗಿ ಡಿ.ಕೆ.ಮಹಾಲಿಂಗಯ್ಯ ಹೇಳುತ್ತಾರೆ.
ಹಿಂದೂ-ಮುಸ್ಲಿಂ ಇಬ್ಬರಲ್ಲೂ ಭಾವೈಕ್ಯತೆ ಮೂಡಬೇಕು ಎನ್ನುತ್ತಾರೆ ವಿನಹ ಭಾವೈಕ್ಯತೆ ಬೆಳಸುವ, ಉತ್ತಮ ಭಾಂದವ್ಯ ವೃದ್ಧಿಸುವ ಕಾರ್ಯಗಳಿಗೆ ಮುಂದಾಗುವುದಿಲ್ಲ. ಅವರ ಹಬ್ಬದಲ್ಲಿ ನಾವು, ನಮ್ಮ ಹಬ್ಬದಲ್ಲಿ ಅವರು ಭಾಗವಹಿಸಿದಾಗ ಮಾತ್ರ ದೇವರೊಬ್ಬನೆ ನಾಮ ಹಲವು ಎನ್ನುವ ಭಾವನೆ ಬೆಳೆದು ಎಲ್ಲರೂ ಒಟ್ಟಿಗೆ ಬಾಳಬಹುದು ಎಂದರು.
ಒಂದು ತಿಂಗಳ ಉಪವಾಸ ವರ್ಷದ ಇನ್ನುಳಿದ 11 ತಿಂಗಳುಗಳ ಜೀವನಕ್ಕೆ ಚೈತನ್ಯ, ಸ್ಫೂರ್ತಿ ತುಂಬಬಲ್ಲದಾಗಿದೆ. ದೇಹವು ಸಾಮಾನ್ಯವಾಗಿ ಬಯಸುವ ಅವಶ್ಯಕತೆಗಳ ಜೊತೆಗೆ ಮಾನಸಿಕ ಪ್ರಲೋಭನೆಗಳನ್ನು ಅದು ತಡೆದು ನಿಲ್ಲಿಸುತ್ತದೆ. ಉಪವಾಸ ಆಚರಿಸಿದರೆ ಹಸಿದವನ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ದೇಹಕ್ಕೆ ಆರೋಗ್ಯ ನೀಡುತ್ತದೆ. ಈ ನಿಟ್ಟಿನಲ್ಲಿ ಈ ವೃತ ಪುರಸ್ಕರಿಸಲು ಇಫ್ತಿಯಾರ್ ಕೂಟ ಆಯೋಜಿಸಿರುವುದಾಗಿ ಹೇಳುತ್ತಾರೆ.ಈ ಸಂದರ್ಭದಲ್ಲಿ ಮಹಮದ್, ದಸ್ತಗಿರಿ, ಗೌಸ್ ಪೀರ್, ಜಬೀಉಲ್ಲಾ, ಸೈಯದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.