ಹುಳಿಯಾರು
ಹೋಬಳಿಯ ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬಗುಂಟೆ ಗ್ರಾಮದಲ್ಲಿ ಕೊರೊನಾ ಸೋಂಕು ತಡೆಗೆ ಗ್ರಾಮಸ್ಥರು ಚೆಕ್ ಪೋಸ್ಟ್ ನಿರ್ಮಿಸಿ,ಸ ಗ್ರಾಮಕ್ಕೆ ಬಂದು ಹೋಗುವವರ ಉಷ್ಣಾಂಶ ಪರೀಕ್ಷೆ ಮಾಡುವ ಮೂಲಕ ಸ್ವಯಂ ನಿರ್ಬಂಧಕ್ಕೆ ಮುಂದಾಗಿದ್ದಾರೆ.
ಗ್ರಾಮಸ್ಥರು ಸಭೆ ನಡೆಸಿ ಹಣ ಸಂಗ್ರಹಿಸಿ ಉಷ್ಣಾಂಶ ಪರೀಕ್ಷೆ ಮಾಪಕ ತಂದಿದ್ದಾರೆ. ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪೊಲೀಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಗ್ರಾಮಕ್ಕೆ ಒಂದೇ ಕಡೆ ಜನರು ಬರುವಂತೆ ಮಾಡಿಕೊಂಡಿದ್ದಾರೆ.
ಗ್ರಾಮಕ್ಕೆ ಬರುವ ಮತ್ತು ಹೋಗುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಾರೆ. ಪಾಳಿ ಮೇಲೆ ಗ್ರಾಮದ ಯುವಕರು ನಿತ್ಯ ಒಂದೊಂದು ತಂಡ ಚೆಕ್ ಪೋಸ್ಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಹೆಚ್ಚು ಉಷ್ಣಾಂಶ ಕಂಡು ಬಂದರೆ ತಕ್ಷಣ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ಗ್ರಾಮಸ್ಥರೂ ಸಹ ಪರ ಊರಿಗೆ ಹೋಗಿ ಬಂದ್ರೆ ಅವರ ತಪಾಸಣೆ ಸಹ ಮಾಡಿ ಒಳಗೆ ಬಿಟ್ಟುಕೊಳ್ಳುತ್ತಾರೆ.
ಒಟ್ಟಾರೆ ಸರ್ಕಾರವನ್ನೆ ಕಾಯದೆ ಸ್ವಯಂ ಪ್ರೇರಣೆಯಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಠಿಣ ಕ್ರಮಕ್ಕೆ ಗ್ರಾಮಸ್ಥರು ಮುಂದಾಗುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ ಜಿ.ಹರ್ತಿ, ವಿವಿಎಸ್‍ಎಸ್ ಸದಸ್ಯ ಡಿ.ಜಿ.ಸತ್ಯನಾರಾಯಣ, ಡಿ.ಗೋವಿಂದ ರಾಜು, ಶಿವಣ್ಣ, ಜಿಯಾವುಲ್ಲಾ, ಕುಮಾರ ಸ್ವಾಮಿ, ನರಸಿಂಹಮೂರ್ತಿ, ನಟರಾಜು, ವೆಂಕಟೇಶ್, ಮಲ್ಲಿಕಾ, ಮಹೇಶ್, ಬಡಗಿ ಮಂಜಣ್ಣ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ