ತುಮಕೂರು
ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ದಿನನಿತ್ಯದ ಸಾಮಗ್ರಿಗಳನ್ನು ರೆಡ್‍ಕ್ರಾಸ್ ಸಂಸ್ಥೆಯ ಛೇರ್ಮನ್ ಎಸ್.ನಾಗಣ್ಣನವರ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿ ಕೋಡಲಾಯಿತು. ಚಿತ್ರದಲ್ಲಿ ಡಿ.ಎಸ್.ಕುಮಾರ್, ಆನಂದ್ ಕುಮಾರ್, ಎಸ್.ಆರ್.ಜಗದೀಶ್, ಸಿದ್ದಪ್ಪ, ಶ್ರೀನಿವಾಸ್, ನಾಗರಾಜ್, ಪರಮೇಶ್, ಸಂಜೀವ್ ಕುಮಾರ್, ರೆಡ್‍ಕ್ರಾಸ ಸಂಸ್ಥೆಯ ಸಾಗರನಹಳ್ಳಿ ಪ್ರಭು, ಪ್ರೊ.ಚಂದ್ರಣ್ಣ, ವೆಂಕಟೇಶ್ ಉಪಸ್ಥಿತರಿದ್ದರು.
ತುಮಕೂರಿನ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬೆಡ್‍ಶೀಟ್‍ಗಳನ್ನು ನೀಡಿದರು. ರೆಡ್‍ಕ್ರಾಸ್ ಛೇರ್ಮನ್ ಎಸ್.ನಾಗಣ್ಣ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉತ್ತರ ಕರ್ನಾಟಕದಾದ್ಯಂತ ಅತೀವ ಮಳೆಯಿಂದ ಜಲಪ್ರಳಯದ ರೀತಿಯಲ್ಲಿ ಪ್ರವಾಹ ಉಂಟಾಗಿ ಹಲವಾರು ಜನ ನಿರಾಶ್ರಿತರಾಗಿದ್ದು, ಈ ಸಂಬಂಧ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಲುವಾಗಿ 4000 ಉಲ್ಲನ್ ಬ್ಲಾಂಕೇಟ್‍ಗಳನ್ನು ಕಳುಹಿಸಲಾಗಿದ್ದು, ಈ ಕಾರ್ಯಕ್ಕಾಗಿ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟೀವ್ ಬ್ಯಾಂಕ್, ಬ್ಯಾಂಕಿನ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ವತಿಯಿಂದ ಒಟ್ಟು ರೂ.7,36,290 ಗಳ ಮೌಲ್ಯದ 4000 ಬೆಚ್ಚನೆ ಹೊದಿಕೆಗಳನ್ನು ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ರೆಡ್‍ಕ್ರಾಸ್ ಸಂಸ್ಥೆ ಛೇರ್ಮನ್ ಎಸ್.ನಾಗಣ್ಣ ಹಾಗೂ ಬ್ಯಾಂಕಿನ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
