ಹೊಸದುರ್ಗ:
ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗಡಿ ಅಹ್ಮದ್ ನಗರ ಚೆಕ್ ಪೋಸ್ಟ್ ನಲ್ಲಿ ಪ್ಲಾಯಿಂಗ್ ಸ್ಕ್ವಾಡ್ ಹಗೂ ಪೊಲೀಸ್ ಅಧಿಕಾರಿಗಳ ಮಿಂಚಿನ ದಾಳಿ ಕಾರ್ಯಚರಣೆಯಿಂದ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ ವಶ ಪಡಿಸಿಕೊಂಡಿರುತ್ತಾರೆ.ಈ ಹಣ ನಿವೃತ್ತ ಡೆಪ್ಯೂಟಿ ರಿಜಿಸ್ಟರ್ ಕೃಷ್ಣಮೂರ್ತಿ ಅವರಿಗೆ ಸೇರಿದ ಹಣವಾಗಿರುತ್ತದೆ. ನಂತರ ಅವರಿಗೆ ಕರೆ ಮಾಡಿ ಕೇಳಿದಾಗ ಜಮೀನು ಮಾರಾಟ ಮಡಿದ ಹಣ ಎಂದು ಹೇಳಿದ್ದಾರೆ.ಇದೇ ವೇಳೆ ತಾಲ್ಲೂಕಿನ ತಹಶೀಲ್ದಾರ್ ವಿಜಯ್ ಕುಮಾರ್, ವೃತ್ತ ನೀರೀಕ್ಷಕ ರುದ್ರಪ್ಪ ಎಲ್, ಪಿ.ಎಸ್.ಐ. ಶಿವನಂಜಶೆಟ್ಟಿ, ಪೊಲೀಸ್ ಸಿಬ್ಬಂದಿ ತ್ಯಾಗರಾಜ್ ನಾಯ್ಕ್ ಹಾಗೂ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ