ಬರಗೂರು :
ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ, ದಾಳಿಂಬೆ ತೋಟ ಸಂಪೋರ್ಣ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗಿಡ ಮತ್ತು ಕೃಷಿ ಸಲಕರಣೆ ಸುಟ್ಟು ಕರಕಲಾಗಿರುವ ಘಟನೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಬಸವನಹಳ್ಳಿ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ದಾಳಿಂಬೆ ತೋಟ ಎನ್ನಲಾಗಿದ್ದು ಕೊಟ್ಟಿ ಸರ್ವೆ ನಂ ; 21/15ರಲ್ಲಿ 2.10 ಎಕರೆ ಭೂಮಿಯಲ್ಲಿ ತೋಟ ಬೆಳಸಲಾಗಿತ್ತು. ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ಯಾರು ಇಲ್ಲದ ವೇಳೆ ಆಕಸ್ಮಿಕವಾಗಿ ಬೆಂಕಿ ತಾಗಿದೆ ನೋಡು ನೋಡುತ್ತಲೆ ಬೆಂಕಿಯ ಕೆನ್ನಲಿಗೆಗೆ ತೋಟ ಸಂಪೋರ್ಣ ಆಹುತಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಬಂದು ಬೆಂಕಿ ಅರಿಸಿದರು ಆದರೆ ಅಷ್ಟೋತ್ತಿಗೆ ತೋಟ ಸುಟ್ಟು ಕರಕಲಾಗಿತ್ತು ಎನ್ನಲಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ತೋಟ ನಾಶವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








