ತುಮಕೂರು:
ಪಿ.ಯು.ಸಿ.ಎಲ್ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ದಿನಾಂಕ-14-06-2019ರಂದು ತುಮಕೂರು ಜಿಲ್ಲಾಧಿಕಾರಿಗಳ ಮುಂಭಾಗ ಪ್ರತಿಭಟನಾ ಧರಣಿ ಮಾಡಲಾಯಿತ್ತು. ಪ್ರತಿಭಟನೆಯನ್ನು ಉದ್ದೇಶಿಸಿ ಸ್ಲಂ ಜನಾಮದೋಲನಾ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿರವರು ಮಾತನಾಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ವೀರನಪುರ ಗೇಟ್ ಶನಿಮಹಾತ್ಮಾ ಕೆಟ್ಟೆಕಟ್ಟೆ ಬಳಿ ಶ್ಯಾನಟ್ರಹಳ್ಳಿಯ ನಿವಾಸಿಯಾದ ಎಸ್.ಪ್ರತಾಪ್ ಎಂಬ ಪರಿಶಿಷ್ಠ ಜಾತಿಯ ಯುವಕ ದೇವಸ್ಥಾನ ಪ್ರವೇಶ ಮಾಡಿದ ಎಂದು ಸವರ್ಣಿಯಾ ಜಾತಿ ಸೂಚಕ ಮನಸ್ಸುವುಳ್ಳವರು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದು
ಮಾನವ ಸಮಾಜ ತಲೆತಗ್ಗಿಸುವಂತಹದ್ದು, ಆದರೆ ಈ ಘಟನೆಯನ್ನು ಕೆಲವು ಮಾಧ್ಯಮಗಳು ತಿರುಚುವ ಪ್ರಯತ್ನ ಮಾಡುತ್ತಿವೆ, ಆದ್ದರಿಂದ ಈ ನೀಚಾ ಕೃತ್ಯ ಮಾಡಿದವರ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಾಡಿ ದಾಖಲಿಸಿ ಕೇಸ್ ನಲ್ಲಿ ಬಾಗಿಗಳಾಗಿರುವ ಆರೋಪಿಗಳನ್ನು ಬಂಧಿಸೀರುವುದು ಸರಿಯಾಷ್ಠೆ, ಇಂತಹ ಘಟನೆ ಮರುಕಳಿಸದ್ದಂತೆ ಕಠಿಣ ಶಿಕ್ಷೆ ನೀಡಬೇಕೆಂದು ಓತ್ತಾಯಿಸಿದರು. ಮನವಿಯನ್ನು ಅಫರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತ್ತು. ಈ ಪ್ರತಿಭಟನೆಯಲ್ಲಿ ವಕೀಲರಾದ ಮಾರುತಿಪ್ರಸಾದ್ ಕೊಳಗೇರಿ ಸಮಿತಿಯ ಕಾರ್ಯದರ್ಶಿಯಾದ ಶೆಟ್ಟಾಳಯ್ಯ ಪದಾಧಿಕಾರಿಗಳಾದ ಮೊಹಮ್ಮದ್ ಹಯಾತ್, ಶಂಕರಯ್ಯ, ಕಣ್ಣನ್, ಅಟೇಕರ್, ಮುರುಗ, ಕೃಷ್ಣ ಮುಂತಾದವರು ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
