ತಿಪಟೂರು :
ದಲಿತ ಯುವಕನ ಮೇಲಿನ ಹಲ್ಲೆ, ಮತ್ತು ಬೆತ್ತಲೆ ಮೆರವಣಿಗೆಯನ್ನು ಖಂಡಿಸಿರುವ ತಾಲ್ಲೂಕು ಡಿ.ಎಸ್.ಎಸ್. ಸಂಘಟನೆ, ಸವರ್ಣೀಯರಿಂದ ನಡೆದಿರುವ ಇಂತಹಾ ಹೀನಾಯ ಕೃತ್ಯ ಖಂಡನೀಯ, ಕೂಡಲೆ ಸರ್ಕಾರ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದೆ.
ಶುಕ್ರವಾರ ಬೆಳಿಗ್ಗೆ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭ ಮಾತನಾಡಿದ ಮಾದಿಗರ ದಂಡೋರ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ದಲಿತ ಮುಖಂಡರು. ಗುಂಡ್ಲುಪೇಟೆ ತಾಲ್ಲೂಕಿನ ವೀರಾಪುರ ಗೇಟ್ ಬಳಿ ದಲಿತ ಯುವಕ ಎಸ್. ಪ್ರತಾಪ್ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದೇ ಅಲ್ಲದೇ.
ಬೆತ್ತಲೆ ಮೆರವಣಿಗೆ ಮಾಡಿರುವುದು ಆದುನಿಕ ಸಮಾಜ ತಲೆ ತಗ್ಗಿಸುವ ವಿಚಾರ. ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗಲು ಮುಂದಾಗುತ್ತಿರುವ ದಲಿತರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ನಾವು ಸೋದರತ್ವ ಬಯಸಿದಂತೆಲ್ಲಾ ನಮ್ಮನ್ನು ದೂರ ಮಾಡಲಾಗುತ್ತಿದೆ. ದಲಿತರ ಮೇಲಿನ ಹಲ್ಲೆ ಯತ್ನಗಳು ಹೀಗೇ ಮುಂದುವರೆದರೆ ನ್ಯಾಯಕ್ಕಾಗಿ ನಾವು ರಕ್ತ ಚೆಲ್ಲಲೂ ಸಿದ್ದ ಎಂದು ಎಚ್ಚರಿಸಿ, ಕೂಡಲೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
