ದಲಿತರ ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ

ದಾವಣಗೆರೆ:

        ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಶುಕ್ರವಾರ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

       ನಗರದ ಪಿಬಿ ರಸ್ತೆಯಲ್ಲಿರುವ ಶ್ರೀಶನೇಶ್ವರ ದೇವಸ್ಥಾನದ ಆರವಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ದಸಂಸ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಎಸ್‍ಸ್ಸಿ, ಎಸ್ಟಿ ಭೂ ಪರಭಾರೆ ನಿಷೇಧ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ತಕ್ಷಣವೇ ಸುಗ್ರಿವಾಜ್ಞೆ ಜಾರಿಗೆ ತಂದು ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ರಾಜ್ಯ ಭೂ ಮಂಜೂರಾತಿ ಕಾಯ್ದೆ 1969ರ ಪ್ರಕಾರ ಎಸ್‍ಸಿ, ಎಸ್ಟಿ ವರ್ಗಗಳಿಗೆ ಶೇ. 50ರಷ್ಟು ಭೂಮಿಯನ್ನು ಈಗಿರುವ ಭೂಮಿಯಲ್ಲಿ ಕಾಯ್ದಿರಿಸಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

         ಪ್ರತಿ ಗ್ರಾಮಗಳಲ್ಲೂ ಎಸ್‍ಸ್ಸಿ, ಎಸ್ಟಿ ವರ್ಗದ ಜನರ ನಿವೇಶನ, ಸ್ಮಶಾನಕ್ಕೆ ನಿಯಮಾನುಸಾರ ಭೂಮಿ ಮೀಸಲಿಡಬೆಕು. ದಲಿತರು ವಾಸವಿರುವ ಎಲ್ಲಾ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕು. ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಎಸ್‍ಸಿ, ಎಸ್ಟಿ ಹಾಸ್ಟೆಲ್‍ಗಳಲ್ಲಿ ಖಾಲಿ ಇರುವ ಸಿಬ್ಬಂಧಿಗಳನ್ನು ಕೂಡಲೇ ನೇಮಕ ಮಾಡಬೇಕು. ತಾಲ್ಲೂಕಿನ ಯರಗುಂಟೆ ಶಾಲೆ ಜಾಗದಲ್ಲಿ ಗುಡಿಸಲು ಹಾಕಿಕೊಂಡಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಟಿವಿ ಸ್ಟೇಷನ್ ಕೆರೆ ಹಿಂಭಾಗದ ಗುಡಿಸಲು ವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಆವರಗೆರೆ ಗೋಶಾಲೆಯಲ್ಲಿ ಸರ್ಕಾರದ ಜಾಗವನ್ನು ಅಲ್ಲಿಯ ಜಮೀನುದಾರರು ಒತ್ತುವರಿ ಮಾಡಿಕೊಂಡಿದ್ದು, ಆ ಜಾಗವನ್ನು ಬಿಡಿಸಿ ಅಲ್ಲಿನ ಗುಡಿಸಲು ವಾಸಿಗಳಿಗೆ ಹಂಚಿಕೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

         ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ, ತಿಮ್ಮಣ್ಣ ಬೋವಿ, ಗೌರಿಪುರದ ಕುಬೇರಪ್ಪ, ಎಚ್. ಮಲ್ಲಿಕಾರ್ಜುನ್ ವಂದಾಲಿ, ಡಿ.ಅಂಜಿನಪ್ಪ, ಬಿ.ಕೆ. ಬಸವರಾಜಪ್ಪ, ಎಂ.ಎಚ್.ಬಸವರಾಜ್, ಟಿ. ರವಿಕುಮಾರ್, ಬುಸೇನಹಳ್ಳಿ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap