ಹುಳಿಯಾರು:
ಎಸ್ಸಿ, ಎಸ್ಟಿ, ನೌಕರರ ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿದಿದೆ ಎಂದು ಹುಳಿಯಾರಿನ ದಲಿತ ಸಹಾಯವಾಣಿ ಅಧ್ಯಕ್ಷ ಹೊಸಹಳ್ಳಿ ಹನುಮಂತಯ್ಯ ಅಭಿಪ್ರಾಯಪಟ್ಟರು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಉದ್ಯೋಗದಲ್ಲಿ ಬಡ್ತಿ ನೀಡುವ 2006 ರ ಎಂ. ನಾಗರಾಜು ಪ್ರಕರಣದ ತೀರ್ಪನ್ನು 7 ಜನ ನ್ಯಾಯಾಧೀಶರ ಉನ್ನತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿರುವುದು ಸ್ವಾಗತಾರ್ಹ ಎಂದರು.
ರಾಜ್ಯಗಳು ಎಸ್ಸಿ, ಎಸ್ಟಿ ಮೀಸಲಾತಿಯಡಿ ಉದ್ಯೋಗದಲ್ಲಿ ಬಡ್ತಿ ನೀಡುವಾಗ ಅವರು ಹಿಂದುಳಿದಿದ್ದಾರೆ ಎಂದು ಸಾಬೀತು ಪಡಿಸುವಂತಹ ಯಾವುದೇ ಬಗೆಯ ದತ್ತಾಂಶ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಬಡ್ತಿ ಮೀಸಲು ಆಯಾ ರಾಜ್ಯಗಳಿಗೆ ಸಂಬಂಧಿಸಿದ್ದು ಎಂದು ನ್ಯಾಯ ಪೀಠ ಹೇಳುವ ಮೂಲಕ ಎಸ್‍ಸಿ ಎಸ್‍ಟಿ ನೌಕರರಿಗೆ ನ್ಯಾಯ ಒದಗಿಸಿದೆ ಇದರಿಂದ 60 ಸಾವಿರಕ್ಕೂ ಹೆಚ್ಚು ನೌಕರರಿಗೆ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
