ಡಿ.ಎಂ.ಎ. ತಂಡದಿಂದ ಇಂದಿರಾ ಕ್ಯಾಂಟೀನ್‍ ಪರಿಶೀಲನೆ..!

ತುಮಕೂರು
      ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳ ತಂಡವೊಂದು ತುಮಕೂರು ನಗರಕ್ಕೆ ಶುಕ್ರವಾರ ಭೇಟಿ ನೀಡಿ, ನಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಮತ್ತು ಮಾಸ್ಟರ್ ಕಿಚನ್‍ನ ಸಮಗ್ರ ಪರಿಶೀಲನೆ ನಡೆಸಿತು.
       ಇಲ್ಲಿ ಇಂದಿರಾ ಕ್ಯಾಂಟೀನ್ ಜೊತೆಗೆ ಸುಸಜ್ಜಿತವಾದ ಮಾಸ್ಟರ್ ಕಿಚನ್ ಸಹ ಇದೆ. ಈ ಮಾಸ್ಟರ್ ಕಿಚನ್‍ನಲ್ಲಿ ಆಹಾರ ಸಿದ್ಧಗೊಂಡು ನಗರದ ಮಂಡಿಪೇಟೆ, ಶಿರಾಗೇಟ್, ಕ್ಯಾತಸಂದ್ರ ಮತ್ತು ರೈಲು ನಿಲ್ದಾಣ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಿಗೆ ಸರಬರಾಜಾಗುತ್ತದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ಸಿದ್ಧಗೊಳಿಸಿ, ಕಂಟೈನರ್‍ಗಳಲ್ಲಿ ಸಂಗ್ರಹಿಸಿ, ವಾಹನದ ಮೂಲಕ ರವಾನೆ ಮಾಡಲಾಗುತ್ತ್ತಿದೆ. ಗುತ್ತಿಗೆದಾರರು ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ. 
     “ಇಲ್ಲಿನ ಕಟ್ಟಡ ಹೇಗಿದೆ? ಕಟ್ಟಡದ ಅಳತೆ ಎಷ್ಟಿದೆ? ಆಹಾರ ಹೇಗೆ ತಯಾರಾಗುತ್ತದೆ? ಆಹಾರ ಪದಾರ್ಥಗಳ ಸಂಗ್ರಹಣೆ ಹೇಗೆ ಮಾಡಲಾಗುತ್ತಿದೆ? ತಯಾರಾಗುವ ಆಹಾರದ ಗುಣಮಟ್ಟ ಯಾವ ರೀತಿ ಇದೆ? ಆಹಾರ ಸರಬರಾಜು ಹೇಗೆ ನಡೆಯುತ್ತಿದೆ? ಬಡವರಿಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ನೀಡಬೇಕೆಂಬ ಸರಕಾರದ ಮುಖ್ಯ ಉದ್ದೇಶ ಈಡೇರು ವಂತಾಗಿದೆಯೇ?” ಎಂಬಿತ್ಯಾದಿ ಮೂಲ ವಿಷಯಗಳ ಬಗ್ಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿತು . ಕರ್ನಾಟಕದ ಲೆಕ್ಕಪರಿಶೋಧಕ ಮಹಾನಿರ್ದೇಶಕರ (ಎ.ಜಿ.) ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹ ಮಾಡುತ್ತಿದೆಯೆನ್ನಲಾಗಿದೆ.
      ಪೌರಾಡಳಿತ ನಿರ್ದೇಶನಾಯಲದ ಮುಖ್ಯ ಯೋಜನಾಧಿಕಾರಿ ರೇಣುಕಾ, ಹಿರಿಯ ಆಡಿಟ್ ಅಧಿಕಾರಿ ನಂಬೂದರಿ, ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಪ್ರಸಾದ್ ಅವರು ಬೆಂಗಳೂರಿನಿಂದ ಆಗಮಿಸಿದ್ದರು. ಇವರ ಜೊತೆಗೆ ತುಮಕೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಮಲ್ಲೇಶ್ ಮತ್ತು ನರಸಿಂಹರಾಜು ಇದ್ದರು.
      ಅಧಿಕಾರಿಗಳ ಈ ತಂಡಕ್ಕೆ ತುಮಕೂರು ಮಹಾನಗರ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಾದ ತಿಪ್ಪೇರುದ್ರಪ್ಪ ಮತ್ತು ಆಶಾ, ಪರಿಸರ ಇಂಜಿನಿಯರ್‍ಗಳಾದ ಮೋಹನ್ ಕುಮಾರ್ ಮತ್ತು ನಿಖಿತ, ಹೆಲ್ತ್ ಇನ್ಸ್‍ಪೆಕ್ಟರ್ ರುದ್ರೇಶ್, ಕಿರಿಯ ಇಂಜಿನಿಯರ್ ನೇತ್ರಾವತಿ ಮೊದಲಾದವರು ಹಾಜರಿದ್ದು, ಮಾಹಿತಿ ಸಂಗ್ರಹಕ್ಕೆ ಸಹಕರಿಸಿದರು. ಅಧಿಕಾರಿಗಳ ತಂಡವು ಕೇಳಿದ ಎಲ್ಲ ಮಾಹಿತಿಗಳನ್ನು ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ನಾಗೇಶ್ ನೀಡಿದರು.
       ಅಧಿಕಾರಿಗಳ ತಂಡವು ಮಾಸ್ಟರ್ ಕಿಚನ್‍ನಲ್ಲಿ ಅಡುಗೆ ತಯಾರಾಗುವ ವಿ`Áನ, ಇಲ್ಲಿನ ಯಂತ್ರೋಪಕರಣಗಳು, ತರಕಾರಿಗಳನ್ನು ಇಡುವ ಫ್ರೀಜರ್, ಆಹಾರ ಪದಾರ್ಥಗಳ ದಾಸ್ತಾನು ಕೊಠಡಿ, ಮಾಸ್ಟರ್ ಕಿಚನ್‍ನ ನೈರ್ಮಲ್ಯ, ಮಾಸ್ಟರ್ ಕಿಚನ್ ಕಟ್ಟಡದ ಸ್ಥಿತಿಗತಿ ಹಾಗೂ ವಿಸ್ತೀರ್ಣ, ಇಂದಿರಾ ಕ್ಯಾಂಟೀನ್‍ನ ವಿಸ್ತೀರ್ಣ, ಕಟ್ಟಡದ ಸ್ಥಿತಿಗತಿ ಇತ್ಯಾದಿಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಮಾಹಿತಿಗಳನ್ನು ದಾಖಲಿಸಿಕೊಂಡಿತು.
ಅಧಿಕಾರಿಗಳ ಸಲಹೆ
       “ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಬಿಳಿ ಬಣ್ಣ ಬಳಿಸಿ ಆಕರ್ಷಕಗೊಳಿಸಬಹುದು. ಆಗ ಒಳಾವರಣ ಶು`À್ರವಾಗಿ ಕಾಣುತ್ತದೆ. ಪ್ರಸ್ತುತ ಇಂದಿರಾ ಕ್ಯಾಂಟೀನ್‍ನಲ್ಲಿ ನಿಂತುಕೊಂಡು ಮಾತ್ರ ಊಟ ಮಾಡಬಹುದಾಗಿದೆ. ವಯಸ್ಸಾದವರು, ವಿಕಲಚೇತನರು ಬಂದರೆ ಅಂಥವರಿಗೆ ತೊಂದರೆ ಆಗಬಹುದು. ಆದ್ದರಿಂದ ಒಂದು ಬದಿಯಲ್ಲಿ ಬೆಂಚನ್ನು ಅಳವಡಿಸಿದರೆ, ಅಗತ್ಯವಿರುವವರು ಕುಳಿತುಕೊಂಡು ಊಟೋಪಹಾರ ಸೇವಿಸಲು ಅನುಕೂಲವಾಗುತ್ತದೆ.
 
       ಇದಲ್ಲದೆ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಸ್ಥಳಾವಕಾಶ ಇರುವುದರಿಂದ ಒಂದಿಷ್ಟು ಹೂಕುಂಡಗಳನ್ನು ಇರಿಸಿ, ಹಸಿರು ವಾತಾವರಣ ಕಲ್ಪಿಸಬಹುದು” ಎಂಬ ಸಲಹೆಗಳನ್ನು ಸದರಿ ಅಧಿಕಾರಿಗಳ ತಂಡವು  ತುಮಕೂರು ಮಹಾನಗರ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಿಗೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link