ಹಿರಿಯೂರು:
ನಗರದ ಇನ್ಹರ್‍ವ್ಹೀಲ್, ರೋಟರಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನೆಹರೂ ಮೈದಾನದಲ್ಲಿನ ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿಯ ಸಾರ್ವಜನಿಕ ಸಭಾ ವೇದಿಕೆಯಲ್ಲಿ ನೃತ್ಯ ಸ್ಪರ್ಧೆ, ಸೋಲೋ ಮತ್ತು ಸಮೂಹ ಗೀತೆಗಳ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಇನ್ಹರ್‍ವ್ಹೀಲ್ ಅಧ್ಯಕ್ಷೆ ಸ್ವಪ್ತಾಸತೀಶ್ ಮಾತನಾಡಿ, ಬೇಬಿ ಸಿಟ್ಟಿಂಗ್‍ನಿಂದ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ನೃತ್ಯ ಸ್ಪರ್ಧೆಗಳನ್ನು ನಡೆಸಿರುತ್ತೇವೆ.ಪುಟ್ಟ ಮಕ್ಕಳ ಅವರಲ್ಲಿನ ಪ್ರತಿಭೆ ಮತ್ತು ಅಚ್ಚುಮೆಚ್ಚಿನ ನೃತ್ಯಗಳನ್ನು ನೀಡಿದವರಿಗೆ ವಿಶೇಷವಾದಂತಹ ಪ್ರಶಸ್ತಿ, ಪದಕಗಳನ್ನು ನೀಡುವುದಾಗಿ ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೇಬಿ ಸಿಟ್ಟಿಂಗ್‍ನಿಂದ 1ನೇ ತರಗತಿ, 2ನೇ ತರಗತಿಯಿಂದ 6ನೇ ತರಗತಿ, 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಬ್ಬಾ ಮೆಚ್ಚಿನ ಸಭ್ಯಗೀತೆಗಳಿಗೆ ನೃತ್ಯವನ್ನು ಮಾಡುವುದರ ಮೂಲಕ ಹಿರಿಯೂರಿನ ಜನತೆಯನ್ನು ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರು ಎಂ.ಎಸ್.ರಾಘವೇಂದ್ರ ರೆಡ್‍ಕ್ರಾಸ್ ಉಪಾಧ್ಯಕ್ಷರು ಹೆಚ್.ಎಸ್.ಸುಂದರ್‍ರಾಜ್, ಶಕ್ತಿ ಗಣಪತಿ ಪೂಜಾ ಸಮಿತಿ ಅಧ್ಯಕ್ಷರು ಸಿದ್ದನಾಯ್ಕ, ಇನ್ಹರ್‍ವ್ಹೀಲ್‍ನ ಅಧ್ಯಕ್ಷರು, ಸ್ವಪ್ನಸತೀಶ್, ಸುಚಿತ್ರಾಅಮರ್‍ನಾಥ್, ಸರ್ವಮಂಗಳಾರಮೇಶ್, ಜ್ಞಾನೇಶ್ವರಿತಿಪ್ಪೇಸ್ವಾಮಿ, ಶಾಲಾ ವಿದ್ಯಾರ್ಥಿಗಳು ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ