ಮಧುಗಿರಿಯಲ್ಲಿ ದಸರಾ ಸಮಾರೋಪ

ಮಧುಗಿರಿ:

       ಪಟ್ಟಣದ ವಿವಿಧ ದೇವಾಲಯಗಳ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಆಯೋಜಿಸಿ ನಂತರ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ವಿಜಯ ದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

      ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಬಾಲಕರ ಪಾಠ ಶಾಲೆಯ ಆವರಣಕ್ಕೆ ವೆಂಕಟರಮಣ , ಮಲ್ಲೇಶ್ವರ , ವೀರಾಂಜನೇಯ , ಕಲ್ಯಾಣ ಆಂಜನೇಯ , ಕನ್ನಿಕಾ ಪರಮೇಶ್ವರಿ , ಮಲ್ಲಿನಾಥ ,ಸಾಯಿಬಾಬ ಉತ್ಸವ ಮೂರ್ತಿಗಳನ್ನು ಕರೆತರಲಾಯಿತು. ಬನ್ನಿ ಗಿಡಕ್ಕೆ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಹಾಗೂ ತಹಶೀಲ್ದಾರ್ ಎ. ತಿಪ್ಪೇಸ್ವಾಮಿ ಪೂಜೆ ಸಲ್ಲಿಸಿದರು. ಭಕ್ತರು ಪರಸ್ಪರ ಬನ್ನಿ ಪತ್ರೆಯನ್ನು ಹಂಚಿಕೊಂಡು ಶುಭ ಹಾರೈಸಿದರು.

     ಪುರಸಭೆ ಸದಸ್ಯ ಎಂ.ವಿ.ಗೋವಿಂದರಾಜು , ಮುಖಂಡರಾದ ಡಿ.ಜಿ.ಶಂಕರನಾರಾಯಣಶೆಟ್ಟಿ , ಡಾ.ಎಂ.ಜಿ.ಶ್ರೀನಿವಾಸಮೂರ್ತಿ , ಶ್ರೀನಿವಾಸಶೆಟ್ಟಿ , ಶ್ರೀಧರ್, ಚಿ.ಸೂ.ಕೃಷ್ಣಮೂರ್ತಿ, ಧನಪಾಲ್, ದ್ವಾರಕನಾಥ್, ಸಣ್ಣಕಾಮಯ್ಯ, ನಾಗೇಶ್ , ತಾತಾ ಬದ್ರಿನಾಥ , ಆರ್.ಎಲ್.ಎಸ್ ರಮೇಶ್, ಡೋಲಿಬಾಬು ದೇವಾಲಯದ ಅರ್ಚಕರಾದ ಶ್ರೀನಿವಾಸಭಟ್ಟರು , ನಟರಾಜ್ ಧೀಕ್ಷಿತ್, ಅನಂತ ಪದ್ಮನಾಭ್ , ಕಾರ್ತಿಕ್ ನೂರಾರು ಭಕ್ತಾಧಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap