ಫಿಕ್ಸ್ ಆಯಿತು ಭಜರಂಗಿ 2 ಟೀಸರ್ ರೀಲಿಸ್ ಗೆ ಡೇಟ್..!

ಬೆಂಗಳೂರು:

      ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಗೆ ಅಂತು ಇಂತು ಫಿಕ್ಸ್ ಆಗಿದೆ  ಬರ್ತ್​ಡೇಯನ್ನ ನೇರವಾಗಿ ಸೆಲೆಬ್ರೇಟ್ ಮಾಡೋಕ್ಕೆ ಆಗದೇ ಇದ್ರೂ, ಈಗಾಗ್ಲೇ ದೊಡ್ಮನೆ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಹುಟ್ಟುಹಬ್ಬದ ಆಚರಣೆ ಶುರುಮಾಡಿದ್ದಾರೆ. ಶಿವಣ್ಣನ ಮಹೋತ್ಸವ ಅಂತ ಈಗಾಗ್ಲೇ ಕಾಮನ್​ ಡಿಪಿ ಮತ್ತು ಲೊಗೋವೊಂದನ್ನ ರೆಡಿಮಾಡಿ, ಇದನ್ನ ಗೀತಾ ಶಿವರಾಜ್ ಕುಮಾರ್ ಕೈಯಲ್ಲಿ ಬಿಡುಗಡೆ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಇದೀಗ ಸಂಭ್ರಮಕ್ಕೆ ಮತ್ತೊಂದು ಸ್ವೀಟ್ ನ್ಯೂಸ್ ಆಯಡ್ ಆಗಿದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡದಿಂದ ಟೀಸರ್ ಬಿಡುಗಡೆ ಮಾಡಲಾಗ್ತಿದೆ. ಜುಲೈ 12 ರಂದು ಬೆಳಿಗ್ಗೆ 11.30 ಕ್ಕೆ ಸರಿಯಾಗಿ ಆನಂದ್ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಭಜರಂಗಿ 2 ಟೀಸರ್ ರಿಲೀಸ್​ ಆಗ್ತಿದೆ.

     ಭಜರಂಗಿ 2 ಸಿನಿಮಾದ ಫಸ್ಟ್ ಲುಕ್​ ಪೋಸ್ಟರ್​ ಈಗಾಗ್ಲೇ ಸಿನಿಮಾ ಮೇಲೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಭಜರಂಗಿ ಸಿನಿಮಾ ಸೂಪರ್ ಸಕ್ಸಸ್​ ಬೆನ್ನಲ್ಲೇ ಭಜರಂಗಿ 2 ಚಿತ್ರಕ್ಕೂ ಬಹುದೊಡ್ಡ ನಿರೀಕ್ಷೆ ಇದೆ. ಎ ಹರ್ಷ ಮತ್ತು ಹ್ಯಾಟ್ರಿಕ್​ ಹೀರೋ ಕಾಂಬಿನೇಷನ್​ ಕೂಡ ಈ ಕುತೂಹಲಕ್ಕೆ ಮತ್ತೊಂದು ಕಾರಣವಾಗಿದ್ದು, ಈ ಹಿಂದೆ ಟಗರು ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿದ್ದ ಭಾವನಾ ಈ ಚಿತ್ರದಲ್ಲೂ ನಾಯಕಿಯಾಗಿ ಮಿಂಚ್ತಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap