ದಾವಣಗೆರೆ ಜಿಲ್ಲೆ ಜನರ ತಲೆ ಕೆಟ್ಟಿರಬೇಕು!

ದಾವಣಗೆರೆ:

      ನಾನು ಜಿಲ್ಲೆಗೆ ಬರುವುದಿಲ್ಲ ಎಂಬುದಾಗಿ ಹೇಳುವ ಜನರ ತಲೆ ಕೆಟ್ಟಿರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

      ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜಿಲ್ಲೆಯ ಸಚಿವನಾದ ಮೇಲೆ ಹಲವಾರು ಬಾರಿ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದ್ದೇನೆ. ಆದರೂ ಕೆಲವರು ನಾನು ಜಿಲ್ಲೆಗೆ ಭೇಟಿ ನೀಡಿರುವುದಿಲ್ಲ ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದು, ಅವರ ತಲೆ ಕೆಟ್ಟಿರಬೇಕೆನ್ನಿಸುತ್ತದೆ ಎಂದರು.

       ಉಸ್ತುವಾರಿ ಸಚಿವರನ್ನು ಬದಲಾಯಿಸಿ, ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಸಚಿವರನ್ನಾಗಿ ಮಾಡಬೇಕೆಂದು ಹೇಳಿರುವವರಿಗೆ ಹೇಳೋರಿಗೆ ತಲೆ ಕೆಟ್ಟಿರಬೇಕು. ಜಿಲ್ಲಾ ಉಸ್ತುವಾರಿ ಬದಲಾಯಿಸೋದು ಬೇಡ ಅಂತಾ ನಾನೇನೂ ಹೇಳಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಬೇಕಿದ್ದರೆ ಬದಲಿಸಿಕೊಳ್ಳಲಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

       ನನ್ನ ಉಸ್ತುವಾರಿ ಇರುವ ದಾವಣಗೆರೆ ಜಿಲ್ಲೆಯ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಅವರಿಂದ ಮಾಹಿತಿ ಪಡೆದು, ಏನು ಕೆಲಸ ಆಗಬೇಕೋ ಅದನ್ನು ಮಾಡುತ್ತೇನಷ್ಟೇ, ಯಾರ್ಯಾರದ್ದೋ ಹೇಳಿಕೆಗೆ ನಾನು ಪ್ರತಿಕ್ರಯಿಸಲ್ಲ ಎಂದು ಹೇಳಿದರು.ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ 1.20 ಲಕ್ಷ ಮತದಾರರಿದ್ದು, ಆ ಎಲ್ಲರೂ ನನಗೇ ಮತ ಹಾಕಿದ್ದಾರಾ? 60 ಸಾವಿರ ಜನ ನನಗೆ ಮತ ಹಾಕಿದ್ದಾರೆ. ಉಳಿದ 60 ಸಾವಿರ ಜನ ವಿರೋಧಿಸಿದ್ದಾರೆ ಎಂದರು.

       ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಗಂಡ-ಹೆಂಡತಿ ಇದ್ದಂತೆ, ಆಗಾಗ ಮನೆಗಳಲ್ಲಿ ಜಗಳ ಆಗುವಂತೆ, ಸರ್ಕಾರದಲ್ಲೂ ಜಗಳ ಆಗುವುದು ಸರ್ವೇ ಸಾಮಾನ್ಯ. ಮೈತ್ರಿ ಸರ್ಕಾರ ಯಾವುದೇ ಡೈವೋರ್ಸ್ ಕೊಡುವುದಿಲ್ಲ. ಮೈತ್ರಿ ಸರ್ಕಾರ ಮೇ.23ರ ನಂತರ ಡೈವೋರ್ಸ್ ಕೊಡುತ್ತದೆಂದು ಕೆಲವರು ಸುಮ್ಮನೆ ಚಟಕ್ಕೆ ಮಾತನಾಡುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.

       ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ವ್ಯಕ್ತಿ ನಾನಲ್ಲ. ಅವಕಾಶ ಎಲ್ಲಿವರೆಗೂ ಇರುತ್ತದೋ ಅಲ್ಲಿವರೆಗೂ ಸಚಿವನಾಗಿರುತ್ತೇನೆ. ಆ ನಂತರ ಶಾಸಕನಾಗಿರ್ತೀನಿ. ಅದೂ ಇಲ್ಲಾಂದ್ರೆ ಮಾಜಿ ಸಚಿವ, ಮಾಜಿ ಶಾಸಕನಾಗಿ ಮನೆಯಲ್ಲಿರ್ತೀನಷ್ಟೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.

        ತುಮಕೂರು ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ಗೆಲುವು ನಿಶ್ಚಿತವಾಗಿದ್ದು, ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಹೇಳೋಕೆ ನಾನು ಎಚ್.ಡಿ.ರೇವಣ್ಣನಲ್ಲ. ದೇವೇಗೌಡರು ತುಮಕೂರಲ್ಲಿ ಗೆಲ್ಲುವುದು ಖಚಿತ. ಎಷ್ಟು ಮತಗಳ ಅಂತರದಲ್ಲಿ ಅಂತಾ ಗೊತ್ತಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap