ದಾವಣಗೆರೆಯಲ್ಲಿ ತಂಪೆರೆದ ಮಳೆರಾಯ

ದಾವಣಗೆರೆ:

       ಬಿಸಿಲ ಬೇಗೆಯಿಂದ ಬಸವಳಿದಿದ್ದ ದಾವಣಗೆರೆಯ ಜನತೆಗೆ ಸೋಮವಾರ ರಾತ್ರಿ ಮಳೆರಾಯ ತಂಪೆರೆದಿದ್ದಾನೆ.ಇತ್ತೀಚೆಗೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ರಸ್ತೆ, ಕಟ್ಟಡಗಳೆಲ್ಲವೂ ಕಾಂಕ್ರೀಟಿ ಕರಣಗೊಂಡಿರುವ ಪರಿಣಾಮ, ಬಿಸಿಲಿನ ಶಾಖವನ್ನು ಹಿರಿಕೊಂಡು, ಅದರ ಎರಡರ ಮಟ್ಟಿಗೆ ಸಿಸಿ ರಸ್ತೆ ಹಾಗೂ ಸಿಮೆಂಟ್ ಕಟ್ಟಡಗಳು ಶಾಖವನ್ನು ಹೊರ ಸೂಸುತ್ತಿದ್ದವು. ಹೀಗಾಗಿ ರಸ್ತೆಯಲ್ಲಿ ಹೋದರೆ ಬೆಂಕಿಯನ್ನು ಪ್ರವೇಶಿಸಿದ ಅನುಭವವಾಗುತಿತ್ತು.

      ಆದರೆ, ಸೋಮವಾರ ರಾತ್ರಿ ಸುಮಾರು ಐದಾರು ನಿಮಿಷಗಳ ಕಾಲ ಈ ವರ್ಷದಲ್ಲಿ ಮೊದಲ ಬಾರಿ ಮಳೆಯ ಸಿಂಚನವಾಗಿದೆ. ಆದ್ದರಿಂದ ತಕ್ಷಣಕ್ಕೆ ಜನರಿಗೆ ತಂಪು ವಾತಾವರಣ ನೀಡಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link