ದಾವಣಗೆರೆ ಕ್ಷೇತ್ರದಲ್ಲಿ 1.18 ಲಕ್ಷ ಹೊಸ ಮತದಾರರು

ದಾವಣಗೆರೆ

       ಕಳೆದ ಐದು ವರ್ಷದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,18,143 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ 14,93,822 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಈ ಬಾರಿ ಒಟ್ಟು 16,11,965 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದು, ಕಳೆದ ಐದು ವರ್ಷದ ಅವಧಿಯಲ್ಲಿ 1,18,143 ಮತದಾರರ ಸಂಖ್ಯೆ ಹೆಚ್ಚಾಗಿದೆ.

        ಕಳೆದ ಚುನಾವಣೆಯಲ್ಲಿದ್ದ 7,58,904 ಪುರಷ ಮತದಾರರ ಸಂಖ್ಯೆ ಈ ಬಾರಿ 8,14,413 ರಷ್ಟು ಏರಿಕೆಯಾಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 7,34,918ರಿಂದ 7,96,874ಕ್ಕೆ ಏರಿಕೆಯಾಗಿದೆ. ಇಲ್ಲಿ ಒಟ್ಟು ಪುರುಷ ಮತದಾರರ ಸಂಖ್ಯೆ ಹೆಚ್ಚಿದ್ದರೂ ಈ ಐದು ವರ್ಷದ ಅವಧಿಯಲ್ಲಿ 55,509 ಜನ ಮಾತ್ರ ಹೊಸ ಪುರುಷ ಮತದಾರರು ನೋಂದಾಯಿಸಿಕೊಂಡಿದ್ದರೆ, 61,956 ಹೊಸ ಮಹಿಳಾ ಮತದಾರರ ನೋಂದಾಯಿಸಿಕೊಂಡ್ಡಿದ್ದು, ಹೊಸ ಮಹಿಳಾ ಮತದಾರರ ನೋಂದಣಿಯೇ ಹೆಚ್ಚಾಗಿದ್ದು, ಪುರುಷರಿಗಿಂತ 6,447ಕ್ಕೂ ಹೆಚ್ಚು ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ವಿಧಾನಸಭಾ ಕ್ಷೇತ್ರವಾರು:

         ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2014ರಲಿದ್ದ 1,70,588 ಮತದಾರರ ಸಂಖ್ಯೆ 2019ಕ್ಕೆ 1,87,927ಕ್ಕೆ ಹೆಚ್ಚಳವಾಗಿದೆ. ಹರಪನಹಳ್ಳಿ ಕ್ಷೇತ್ರದಲ್ಲಿದ್ದ ಮತದಾರರ ಸಂಖ್ಯೆಯು 95,863ರಿಂದ 2,02,320ಕ್ಕೆ ಏರಿಕೆಯಾಗಿದೆ. ಹರಿಹರ ಕ್ಷೇತ್ರದಲ್ಲಿದ್ದ 1,97,021 ಮತದಾರರ ಸಂಖ್ಯೆಯು 2,05,547ಕ್ಕೆ ಹೆಚ್ಚಿಗೆಯಾಗಿದೆ.

        ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2,19,363ರಿಂದ 2,37,623ಕ್ಕೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,88,988ರಿಂದ 2,04,160ಕ್ಕೆ, ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 1,76,333ರಿಂದ 1,88,350ಕ್ಕೆ, ಚನ್ನಗಿರಿ ಕ್ಷೇತ್ರದಲ್ಲಿ 1,77,508ರಿಂದ 1,94,147ಕ್ಕೆ, ಹೊನ್ನಾಳಿ ಕ್ಷೇತ್ರದಲ್ಲಿ 1,76,930ರಿಂದ 1,91,891ಕ್ಕೆ ಮತದಾರರ ಸಂಖ್ಯೆ ಹೆಚ್ಚಾಗಿದೆ.

         ಕ್ಷೇತ್ರದಲ್ಲಿ 8,14,413 ಪುರುಷ, 7,96,874 ಮಹಿಳಾ, 110 ತೃತೀಯಲಿಂಗಿ ಹಾಗೂ 568 ಜನ ಸೇವಾ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16,11,965 ಮತದಾರರಿದ್ದಾರೆ.

ಯುವ ಮತದಾರರ ಮೇಲೆ ಕಣ್ಣು:

        ಚುನಾವಣಾ ಫಲಿತಾಂಶವನ್ನೇ ಮೇಲೆ, ಕೆಳಗೆ ಮಾಡುವ ಶಕ್ತಿ ಹೊಸ ಹಾಗೂ ಯುವ ಮತದಾರರಿಗಿದೆ. ಹೀಗಾಗಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಹೊಸ ಮತದಾರರನ್ನು ಓಲೈಸಲು ಮುಂದಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಹೊಸ ಯುವ ಮತದಾರರು ಸೆಳೆಯಲು ಬಿಜೆಪಿ 1 ಬೂತ್‍ಗೆ 10 ಯೂತ್ಸ್‍ಗಳನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನ ಮಾಡುತ್ತಿದೆ. ಯಾರ ಬಳಿ ಬೈಕ್ ಇರುತ್ತದೆಯೋ ಅಂತವರನ್ನು ಒಟ್ಟಿಗೆ ಸೇರಿಸಿ 5 ಬೂತ್‍ಗಳಿಂದ ಬೈಕ್ ರ್ಯಾಲಿಯನ್ನು ಸಹ ನಡೆಸಿದೆ.

        ಇನ್ನು ಶಕ್ತಿ ಕೇಂದ್ರದ ಮೂಲಕ ಮೋದಿ ಕಾರ್ಯಕ್ರಮಗಳನ್ನು ಯುವಕರಿಗೆ ತಿಳಿಸಲು ಯೂತ್ ಓಟರ್ಸ್ ಸಮಾವೇಶಕ್ಕೆ ವೇದಿಕೆ ಸಿದ್ದ ಮಾಡಿದೆ. ಅಲ್ಲದೇ ಮೈ ಫಸ್ಟ್ ಓಟ್ ಫಾರ್ ಮೋದಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಇನ್ನು ಜಿಲ್ಲಾ ಮಟ್ಟದಲ್ಲಿ ಕಬ್ಬಡಿ, ಕ್ರಿಕೆಟ್ ಆಟವನ್ನು ಕಮಲಕಪ್ ಎಂಬ ಹೆಸರಿನೊಂದಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲು ಸಹ ಸಿದ್ಧತೆ ನಡೆಸಿದೆ.

        ಯುವ ಮತದಾರರ ನಿರ್ಧಾರಗಳು ರಾಜಕೀಯ ಪಕ್ಷ ಗಳ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡುವ ಸಂದರ್ಭ ಇರುವುದರಿಂದ ಎರಡು ರಾಷ್ಟ್ರೀಯ ಪಕ್ಷಗಳು ಸಾಮಾಜಿಕ ಜಾಲತಾಣ ಬಳಸಿಕೊಂಡು, ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಧಾರಗಳನ್ನು ಅಳೆಯುವುದು, ಅಭಿಪ್ರಾಯ ನೀಡುವಿಕೆ, ಪ್ರತ್ಯಕ್ಷ ಮತ್ತು ಪರೋಕ್ಷ ವಾಗಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿಕೆಯಿಂದ ಆಗುವ ಲಾಭಗಳ ಬಗ್ಗೆ ತಿಳಿಸಲು ಮುಂದಾಗಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link