ದಾವಣಗೆರೆ:
ಕರ್ನಾಟಕ ಸ್ಲಂ ಜನಾಂದೋಲನ ಸಮಿತಿಯ ಪದಾಧಿಕಾರಿಗಳ ಆಹ್ವಾನದ ಮೇರೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಗರದ ವಿವಿಧ ಕೊಳಗೇರಿಗಳಿಗೆ ಭೇಟಿ ನೀಡಿ, ಕೊಳಗೇರಿ ನಿವಾಸಿಗಳ ಸಮಸ್ಯೆ ಗಳನ್ನು ಆಲಿಸಿದರು.
ನಗರದ ಮಹಾವೀರ ನಗರ, ಶಿವನಗರ, ಮಂಡಕ್ಕಿ ಭಟ್ಟಿ ಲೇಔಟ್, ಕಾರ್ಲ್‍ಮಾಕ್ರ್ಸ್ ನಗರ, ಇಂದಿರಾ ನಗರ ಎ.ಕೆ.ಕಾಲೋನಿ, ಸಿದ್ದರಾಮೇಶ್ವರ ಬಡಾವಣೆ, ಹೆಚ್.ಕೆ.ಆರ್ ನಗರ, ಅಣ್ಣಾ ನಗರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನಗರ ಸಂಚಾರ ನಡೆಸಿ ಅಲ್ಲಿಯ ನಾಗರೀಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಂಜುನಾಥ ಆರ್. ಬಳ್ಳಾರಿ, ಸ್ಲಂ ಬೋರ್ಡ್‍ನ ಎ.ಇ. ಎಸ್.ಎಲ್.ಆನಂದಪ್ಪ, ಕರ್ನಾಟಕ ಸ್ಲಂ ಜನಾಂದೋಲನ ಸಮಿತಿಯ ಜಿಲ್ಲಾ ಸಂಚಾಲಕಿ ರೇಣುಕ ಯಲ್ಲಮ್ಮ, ಜಿಲ್ಲಾಧ್ಯಕ್ಷ ಎಂ.ಶಫಿಸಾಬ್, ಉಪಾಧ್ಯಕ್ಷ ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ