ಪ್ರಾಂಶುಪಾಲಗೆ ಕ್ಲಾಸ್ ತೆಗೆದುಕೊಂಡ ಡಿಸಿ..!

ಹೊಸದುರ್ಗ:

       ಪಟ್ಟಣದ ಜ್ಯೂನಿಯರ್ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ ಅವರು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ವಿಜ್ಞಾನ ಪ್ರಯೋಗಾಲಯವನ್ನು ವೀಕ್ಷಿಸಿ ಮಾತನಾಡಿದರು. ಪ್ರಯೋಗಾಲಯಕ್ಕೆ ಭೇಟಿ ನೀಡಿದ ಡಿಸಿ ವಿನೋತ್ ಪ್ರಿಯಾ, ಇಲ್ಲಿನ ಉಪಕರಣಗಳ ಮೇಲೆ ಬಿದ್ದಿರುವ ದೂಳಿನ ಕಣಗಳನ್ನು ನೋಡಿದರೇ ಪ್ರಯೋಗಾಲಯವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲವೆಂಬ ಅನುಮಾನ ಮೂಡುತ್ತಿದೆ.

      ಎಷ್ಟು ದಿನಕ್ಕೊಮ್ಮೆ ಉಪಕರಣಗಳನ್ನು ಬಳಕೆ ಮಾಡುತ್ತಿರುವೀರಿ, ವಿದ್ಯಾರ್ಥಿಗಳನ್ನು ಪ್ರಯೋಗಲಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೀರಾ, ವಿದ್ಯಾರ್ಥಿಗಳಿಗೆ ಇದರ ಲಭ್ಯತೆ ಸಿಗುತ್ತಿದೆಯಾ, ಎಂಬ ಪ್ರಶ್ನೆಗೆ, ಪಠ್ಯಕ್ಕೆ ಸಂಬಂಸಿದ ಆಯಾ ತರಗತಿ ಉಪನ್ಯಾಸಕರು ಪ್ರಯೋಗಾಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳನ್ನು ಪ್ರಯೋಗಾಲಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಉಪನ್ಯಾಸಕರು ವಿವರಣೆ ನೀಡಿದರು.

      ಇಲ್ಲಿನ ಕಟ್ಟಡ ತುಂಬಾ ಹಳೆಯದ್ದು ಹಾಗೂ ಶಿಥಿಲಗೊಂಡಿದೆ. ಬಿರುಕು ಬಿಟ್ಟ ಹಾಗೂ ಶಿಥಿಲಗೊಂಡಿರುವುದನ್ನು ಪೋಟೋ ಮತ್ತು ವಿಡಿಯೋ ಚಿತ್ರಿಕರಣ ಮಾಡಿ ಕಚೇರಿಗೆ ಕಳುಹಿಸಿ ಹಾಗೂ ಕಾಲೇಜಿನ ಫಲಿತಾಂಶ ಹೆಚ್ಚಳವಾಗುವ ನಿಟ್ಟಿನಲ್ಲಿ ಎಲ್ಲಾ ಉಪನ್ಯಾಸಕರು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಪ್ರಾಂಶುಪಾಲ ಮಲ್ಲಪ್ಪ ಅವರಿಗೆ ಸೂಚಿಸಿದರು.

      ಕಾಲೇಜು ಪ್ರಾಂಶುಪಾಲ ಮಲ್ಲಪ್ಪ ಪ್ರತಿಕ್ರಿಯಿಸಿ, 1979ರಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕೆಲವು ಕೊಠಡಿಗಳು ಬೀಳುವ ಸ್ಥಿತಿಗೆ ತಲುಪಿದೆ. ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಶಾಸಕರ ಅನುದಾನ ಮತ್ತು ಸಂಸದರ ಅನುದಾನಡಿಯಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಸುಮಾರು 8 ಕೋಟಿ ರೂ ಅನುದಾನವಾದರೂ ಬೇಕಾಗುತ್ತದೆ ಎಂದು ಡಿಸಿ ಅವರಿಗೆ ತಿಳಿಸಿದರು.

     ಈ ವೇಳೆ ತಹಸೀಲ್ದಾರ್ ವಿಜಯ್ ಕುಮಾರ್, ಬಿಇಓ ಎಲ್.ಜಯಪ್ಪ, ತಾಪಂ ಸಹಾಯಕ ನಿರ್ಧೇಶಕ ರಂಗನಾಥ್, ಬಿಸಿಎಂ ವಿಸ್ತೀರಣಾಕಾರಿ ಶಶಿಧರ್, ಸಮಾಜ ಕಲ್ಯಾಣ ಇಲಾಖೆ ಅಕಾರಿ ಬಡಿಗೇರ್, ಕಾಲೇಜು ಉಪನ್ಯಾಸಕರು ಹಾಜರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap