ಶಿರಾ:
ಶಿರಾ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ದೊಡ್ಡ ಕೆರೆಯ ಜಲ ಸಂಗ್ರಹಾಗಾರಕ್ಕೆ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಮಂಗಳವಾರ ಭೇಟಿ ನೀಡಿದರು.
ಮಂಗಳವಾರದಮದು ಕಾರ್ಯನಿಮಿತ್ತ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ನಗರಸಭೆಯ ಸಿಬ್ಬಂಧಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಿರಾ ಕೆರೆಯಲ್ಲಿ ಸಂಗ್ರಹಗೊಳ್ಳುತ್ತಿರುವ ಹೇಮಾವತಿಯ ನೀರಿನ ಸಮೀಕ್ಷೆ ನಡೆಸಿದರು.
ಈಗಾಗಲೇ ಶಿರಾ ಕೆರೆಯಿಂದ ನಗರದ ಜನತೆಗೆ ಕುಡಿಯಲು ಹೇಮಾವತಿಯ ನೀರನ್ನು ಶುದ್ಧೀಕರಿಸಿ ನೀಡಲಾಗುತ್ತಿದ್ದು ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿಯ ನೀರನ್ನು ಶಿರಾ ಕೆರೆಗೆ ಪೂರೈಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು.
ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ಆಯುಕ್ತ ಗಂಗಣ್ಣ, ಎ.ಇ.ಇ. ಸೇತುರಾಮ್‍ಸಿಂಗ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಮಂಜುನಾಥ್, ಅಕ್ಷತ್ ಸೇರಿದಂತೆ ನಗರಸಭೆಯ ಸಿಬ್ಬಂಧಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ