ಆಸ್ಪತ್ರೆ ಸೇರಿ ವಿವಿಧ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಭೇಟಿ

ಹರಿಹರ :

     ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿ ಚಿಕಿತ್ಸೆ ಸಮರ್ಪಕವಾಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗಿ .ನಗರದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರದಂದು ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಸ್ಪತ್ರೆ ಆವರಣ, ಕೊಠಡಿಗಳು,ವಾರ್ಡ, ತುರ್ತುನಿಗಾ ಘಟಕಗಳನ್ನು ಪರಿಶೀಲನೆಯ ನಂತರ ಹೊರ ಮತ್ತು ಒಳ ರೋಗಿಗಳನ್ನು ಮಾತನಾಡಿಸಿ ಅವರಿಗೆ ನೀಡುತ್ತಿ ರುವ ಚಿಕಿತ್ಸೆ ಸಮರ್ಪಕ ವಾಗಿರುವ ಬಗ್ಗೆ ಮಾಹಿತಿ ಪಡೆದರು. ಕರ್ತವ್ಯನಿರತ ವೈದ್ಯರು ಹಾಗೂ ಸಿಬ್ಬಂದಿ ಬಳಿ ಆಸ್ಪತ್ರೆಯ ಅವಶ್ಯ ಇರುವ ಸೌಲಭ್ಯ ಗಳ ಬಗ್ಗೆ ಮಾಹಿತಿ ಪಡೆದುಕೊಂಡುರು.

    ನಂತರ ನಗರ ಸಭೆ ಪೌರಯುಕ್ತೆ ಎಸ್.ಲಕ್ಷ್ಮಿ ಮತ್ತು ಸಿಬ್ಬಂದಿ ಯೊಂದಿಗೆ ನಗರ ಪ್ರದಕ್ಷಣೆ ನಡೆಸಿ ನಗರದ ಭಾರತ ಆಯಿಲ್ ಮಿಲ್ ಕಾಂಪೌಂಡ್ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಮೂಲಬೂತ ಸೌಕರ್ಯಗಳ ಬಗ್ಗೆ ವಿಚಾರಿಸಿದರು. ನಂತರ ಮೊಚಿ ಕಾಲೊನಿಯ ಪ್ರದೇಶವನ್ನು ವೀಕ್ಷಿಸಿ. ಜನ ಸಾಮಾನ್ಯರ ಕುಂದು ಕೊರತೆ ಗಳನ್ನು ಆಲಿಸಿದರು.

      ಮಹಾತ್ಮ ಗಾಂಧಿ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಶುಧ್ಧ ಕುಡಿಯು ನೀರಿನ ಘಟಕ ವೀಕ್ಷಿಸಿ ಸ್ವತಹ ತಾವೆ ನೀರನ್ನು ಕುಡಿದು ನೀರಿನ ಗುಣ ಮಟ್ಟ ಪರಿಕ್ಷಿಸಿ , ಆ ಭಾಗದ ಮನೆ ಮನೆಗೆ ತೆರಳಿ ಖುದ್ದು ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಅಲ್ಲಿ ಮನೆಗಳು ಚಿಕ್ಕವು ಇರುವುದರಿಂದ ಈ ಭಾಗಕ್ಕೆ ಮಹಿಳೆಯರಿಗೆ ಇರುವಂತೆ ಪುರುಷರಿಗು ಸಹ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸು ವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಹಳೆ ಹರ್ಲಾಪುರದಲ್ಲಿರುವ ಕೊಳಚೆ ನೀರು ಶುಧ್ಧಿಕರಣ ಘಟಕದ ಕಾಮಗಾರಿ ವೀಕ್ಷಿಸಿ ಕಳೆದ ಸುಮಾರು ವರ್ಷಗಳಿಂದ ನಾನು ವೀಕ್ಷಿಸಿದಂತೆ ಈ ಕಾಮಗಾರಿಯು ಸಮರ್ಪಕವಾಗಿ ಇಲ್ಲವೆಂದು ಗಮನಿಸಿದ ಜಿಲ್ಲಾಧಿಕಾರಿಗಳು ನಗರಸಭೆಯ ಅಧಿಕಾರಿಗಳು ಇತ್ತಕಡೆ ಸಂಪೂರ್ಣ ಗಮನ ಹರಿಸಿ ಬೇಗನೆ ಪೂರ್ಣಗೊಳಿಸಲು ಸೂಚಿಸಿದರು.

     ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ನಿವಾಸಿಗಳಿಂದ ಅರಿತು ಚರಂಡಿ,ಕುಡಿಯುವ ನೀರು ಮತ್ತು ರಸ್ತೆಗಳನ್ನು ತ್ವರಿತ ಗತಿಯಲ್ಲಿ ಯೋಜನೆ ಗಳನ್ನು ಸಿದ್ಧಪಡಿಸಿ ನಿರ್ಮಾಣ ಕೈಗೊಳ್ಳುವಂತೆ ಸೂಚಿಸಿದ ಅವರು ಇಲ್ಲಿರುವ ಹೆಲಿಪ್ಯಾಡ ನಿರ್ಮಿಸುವ ಸಲು ವಾಗಿ ಸ್ಥಳ ಪರಿಕ್ಷೆಯನ್ನು ಸಹ ನಡೆಸಿದರು.

      ಕೊನೆಯಲ್ಲಿ ಕ್ಷೇತ್ರಪಾಲಕ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ನಂತರ ದೇಸ್ಥಾನದ ಬಳಿ ಇರುವ ಕೆಲವು ಪುರಾತನ ಅವಶೇಷಗಳನ್ನು ಸಂಗ್ರಹಿಸಿ ಸಂರಕ್ಷಿಸಿಸುವಂತೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಿ, ದೇವಸ್ಥಾನದ ಬಳಿ ಪ್ರವಾಸಿಗರಿಗೆ ಶುಧ್ಧ ಕುಡಿಯುವ ನೀರು ಹಾಗೂ ಶೌಚಲಯದ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿ ದರು.

     ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ.ವಾಗೀಶ್ ಸ್ವಾಮಿ,ನಗರಸಭೆ ಸದಸ್ಯರು ಗಳಾದ ಜಂಭಣ್ಣ,ಆಟೋ ಹನುಂತಪ್ಪ, ಮುಖಂಡ ರಾದ ಚಂದ್ರ ಶೇಖರ ಪೂಜಾರ್, ನಗರಸಭೆ ಪೌರಯುಕ್ತೆ ಎಸ್.ಲಕ್ಷ್ಮಿ ಇಂಜಿನಿಯರ್‍ಗಳಾದ ಡಾ. ಹಮಿದ್, ನೌಷಾದ್, ಮಹೇಶ ಕೋಡಬಾಳ್, ಆರೋಗ್ಯ ನೀರಿಕ್ಷರಾದ ರವಿಪ್ರಕಾಶ್, ಸಂತೋಷ ನಾಯ್ಕ್, ಕೊಡಿ ಭೀಮರಾಯ ಮುಂತಾದವರು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link