ಅಕ್ರಮ ಕಲ್ಲುಗಾಣಿಗಾರಿಕೆಗೆ ಸ್ಥಳಗಳಿಗೆ ಜಿಲ್ಲಾಧಿಕಾರಿ ಬೇಟಿ

ಹರಪನಹಳ್ಳಿ:

    ಕಲ್ಲುಗಣಿಗಾರಿಕೆ ಹೆಸರಿನಲ್ಲಿ ಅಕ್ರಮವಾಗಿ ಸ್ಥಳವನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂದು ಮಾಹಿತಿಹಕ್ಕುದಾರನ ದೂರಿನ ಅನ್ವಯ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಲೋಕಾಯುಕ್ತರು ಬೇಟಿ ನೀಡಿ ಪರಿಶೀಲಿಸಿದರು.

   ತಾಲ್ಲೂಕಿನ ಮಾದಪುರ ಕಂದಾಯ ಗ್ರಾಮದ ಸರ್ವೆ ನಂ.419/ಬಿಎ.7ಪಿ2 ಮತ್ತು 429ಎ ರ ವಿಸ್ತೀರ್ಣ 1.75ಎಸಿ ರಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದಾಗ ಕಾನೂನಿನಡಿಯಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಆದರೆ ಈ ಪ್ರದೇಶವು 79 ಎಕ್ಕರೆ ವಿಸ್ತೀರ್ಣದಲ್ಲಿ ಅರಣ್ಯ ಇಲಾಖೆಯ ಸಸಿ ನೆಡುತೋಪಿಗೆ ಕಂದಾಯ ಇಲಾಖೆ ನೀಡಿರುತ್ತದೆ. ಉಳಿದ 74 ಎಕ್ಕರೆ ಪ್ರದೇಶವು ವ್ಯತ್ಯಾಸ ಕಂಡುಬರುತ್ತದೆ. ಇದನ್ನು ಒತ್ತುವರಿ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಿದರು.

    ಸ್ಥಾನಿಕ ಮಹಜರ ವರದಿ ಹಾಗೂ ಪ್ರಸ್ತುತ ಪ್ರದೇಶದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿಯಾಗಿ ಮೋಜಿಣಿದಾರರಿಂದ ಅಳತೆ ಮಾಡಿ ನಕ್ಷೆಯೊಂದಿಗೆ ವಾಸ್ತುಸ್ಥಿತಿ ಡಿಜಿಟಲ್ ಸರ್ವೆ ಮಾಡಿ ಸಮಗ್ರ ವರದಿಯನ್ನು ನೀಡುವಂತೆ ಸರ್ವೇಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

    ಈ ಹಿಂದೆ ಅನಧಿಕೃತವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ಏಳು ಜನರ ಮೇಲೆ ಪ್ರಕರಣ ದಾಖಲಾಗಿಸಲಾಗಿದೆ, ಮುಂದಿನ ದಿನಗಳಲ್ಲಿ ಇವರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ವಿದ್ಯುತ್ ಸರಬರಾಜು ಇಲಾಖೆಗೆ ಆದೇಶ ನೀಡಲಾಗಿದೆ ಎಂದರು.ತಾಲೂಕಿನ ಉಚ್ಚಂಗಿದುರ್ಗ ವ್ಯಾಪ್ತಿಯಲ್ಲಿನ ಕಲ್ಲುಗಣಿಗಾರಿಕೆಗಳ ಸ್ಥಳಕ್ಕೂ ಜಿಲ್ಲಾಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಹೊಸಪೇಟೆ ಲೋಕಾಯುಕ್ತ ವಸಂತ ಅಸೋದೆ, ಅರಣ್ಯ ವಲಯ ಅಧಿಕಾರಿ ಟಿ.ಭರತ್, ಕಂದಾಯ ಇಲಾಖೆಯ ಅಧಿಕಾರಿ ಅರವಿಂದ್, ಸುದೀರ್‍ನಾಯ್ಕ, ಗ್ರಾಮಲೆಕ್ಕಿಗ ಶ್ರೀಕಾಂತ, ಕ್ವಾರಿ ಮಾಲೀಕ ಸಲೀಂ ಭಾಷ, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಸರ್ವೆ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link