ರೈತರಿಂದ ಸಂಗ್ರಹಿಸಿದ ಡಿಪಾಸಿಟ್ ಹಣ ರೈತನ ಡಿ.ಸಿ.ಸಿ ಬ್ಯಾಂಕಿನ ಖಾತೆಯಲ್ಲಿರುತ್ತದೆ

ಮಧುಗಿರಿ

      ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ .ನಿ. ದಲ್ಲಿ ಸೆ 22 ರಂದು 2017-2018 ನೇ ಸಾಲಿನ ಸರ್ವಸದಸ್ಯರ ವಾóರ್ಷಿಕ ಮಹಾಸಭೆಯನ್ನು ಏರ್ಪಡಿಸಲಾಗಿದ್ದು ಸದರಿ ಮಹಾಸಭೆಯ ಅದ್ಯಕ್ಷತೆಯನ್ನು ಟಿ ಪಲ್ಲಪ್ಪ ವಹಿಸಿದ್ದರು.

       ಸದರಿ ವಾರ್ಷಿಕ ಮಹಾಸಭೆಯಲ್ಲಿ ಸಾಲ ಪಡೆದವರು ಸಾಲ ಮನ್ನಾ ಆಗಿರುವ ಬಗ್ಗೆ ಹಾಗೂ ವಿ.ಎಸ್‍ಎಸ್.ಎನ್ ಸಂಘದವರು ರೈತರುಗಳಿಗೆ ಸಾಲ ನೀಡುವಾಗ ಠೇವಣಿ ಸಂಗ್ರಹಿಸಿರುವ ಬಗ್ಗೆ ರೈತರುಗಳಿಗೆ ಕಡಿತ ಗೊಳಿಸಿದ ಹನದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಇದಕ್ಕೆ ಉತ್ತರಿಸಿದ ಮುಖ್ಯನಿರ್ವಹಣಾಧಿಕಾರಿ ಎನ್ ಡಿ ಮದಲೇಟಪ್ಪ ಮಾತನಾಡಿ ರೈತರಿಗೆ ಸಾಲ ನೀಡುವಾಗ ಕಡಿತಗೊಳಿಸಿದ ಹಣ ಸದರಿ ರೈತನ ಹೆಸರಿನಲ್ಲಿಯೇ ಕೆ.ಸಿ.ಸಿ ಸಾಲಕ್ಕೆ ಸಂಬಂಧಿಸಿದ ಡಿ.ಸಿ.ಸಿ ಬ್ಯಾಂಕಿನಲ್ಲಿಯೇ ಠೇವಣಿಯಾಗಿರುತ್ತದೆ.

       ರೈತನೆನಾದರು ಸೊಸೈಟಿಯಲ್ಲಿ ಇನ್ನು ಮುಂದೆ ಸಾಲ ಬೇಡವೆಂದು ತನ್ನ ಖಾತೆಯನ್ನು ರದ್ದುಪಡಿಸಿಕೊಂಡಲ್ಲಿ ಸಂಗ್ರಹಿಸಲಾದ ಹಣವನ್ನು ಹಿಂತಿರುಗಿಸಲಾಗುವುದೆಂದು ಹಾಗೂ ನಮಗೆ ಕೆ.ಸಿ.ಸಿ ಸಾಲ ಮಂಜೂರು ಮಾಡಿದಾಗಲೇ ಸದರಿ ಬ್ಯಾಂಕಿನವರೇ ಠೇವಣಿ ಹಣವನ್ನು ಮುಟ್ಟುಗೊಲು ಹಾಕಿಕೊಳ್ಳುತ್ತಾರೆಯೇ ವಿನಃ ವಿ.ಎಸ್.ಎಸ್.ಎನ್ ಸಂಘದವರು ಬಳಸಿಕೊಳ್ಳುತ್ತಿಲ್ಲ ಎಂಬುದಾಗಿ ತಿಳಿಸಿದರು.

       ರಂಗಶಾಮಣ್ಣ, ರವಿ, ನಾಗಭೂಷಣ್, ಎಂ.ವಿ ನಾಗರಾಜು, ನಿವೃತ್ತ ರಕ್ಷಕ ಬಸವರಾಜು, ಹನುಮಮತರೆಡ್ಡಿ ಇನ್ನು ಮುಂತಾದವರು ಷೇರುದಾರರಿಗೆ ಷೇರು ಹಣಪಾವತಿಸಿದವರಿಗೆ ಅಕೌಂಟ್ ಬುಕ್ ಕೋಡುವಂತೆ ಒತ್ತಾಯಿಸಿದರು. ಷೇರು ದಾರರಾಗಿದ್ದು ಷೇರು ಖಾತೆಗೆ ಸಾಕಷ್ಠು ಹಣಪಾವತಿಸದಿದ್ದವರಿಗೆ ಸಂಪೂರ್ಣ ಷೇರು ಮೊತ್ತವನ್ನು ಸಂಗ್ರಹಿಸುವಂತೆ ಸಲಹೆ ನೀಡಿದರು. ಸದರಿ ವಿ.ಎಸ್.ಎಸ್ ಎನ್ ಸೊಸೈಟಿಯಲ್ಲಿ 1445 ಷೇರುದಾರರಿತ್ತಾರೆ.

       ಏಳು ಗ್ರಾಮಗಳು ಒಳಪಡುತ್ತವೆ. 2017-18 ನೇ ಸಾಲಿನಲ್ಲಿ 3.98 ಲಕ್ಷ ಹಣ ಲಾಭವಾಗಿರುತ್ತದೆ. ಸದರಿ ಲಾಭದ ಹಣವನ್ನು ಈ ಹಿಂದೆ ಸೋಸೈಟಿ ಸುಮಾರು 18 ಲಕ್ಷ ನಷ್ಠವಾಗಿದ್ದು ಸದರಿ ಲಾಭದ ಹಣವು ನಷ್ಠದ ತಿರುವಳಿ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದರು.

       2016-2017 ಸಾಲಿನಲ್ಲಿ ಘನ ಸರ್ಕಾರವು ರೈತರ ಸಾಲಮನ್ನಾ ಘೋಷಿಸಿದಾಗ ಈ ಸೋಸೈಟಿಗೆ ಸೇರಿದ 665 ರೈತರಿಗೆ 1 ಕೋಟಿ 94 ಲಕ್ಷ ಸಾಲಮನ್ನಾವಾಗುರುತ್ತದೆ. ಮತ್ತೆ 2017-2018 ಸಾಲಿನಲ್ಲಿ 2.95 ಕೋಟಿ ರೂಗಳ ಹಣವನ್ನು ಕೆ.ಸಿ.ಸಿ ಸಾಲ 816 ರೈತರಿಗೆ ನೀಡಿರುವುದಾಗಿ ಸಂಘದ ನಿರ್ದೇಶಕರಾದ ಎಂ ಎಸ್ ಮಲ್ಲಕಾರ್ಜುನಯ್ಯ ತಿಳಿಸಿದರು.

        ಈ ಹಿಂದೆ ವಿ.ಎಸ್.ಎಸ್.ಎನ್ ಸೊಸೈಟಿಗಳಲ್ಲಿ ಹನ್ನೋಂದು ಜನ ನಿರ್ದೇಶಕರಿರುತ್ತಾರೆ. ಈಗ ಮತ್ತೆ ಸರ್ಕಾರದ ಸುತ್ತೋಲೆ ಪ್ರಕಾರ ಎಸ್.ಸಿ ಗೆ ಒಂದು ಸ್ಥಾನ ಮತ್ತು ಎಸ್ ಟಿ ಗೆ ಒಂದು ಸ್ಥಾನವನ್ನು ನಿಗದಿಪಡಿಸಿದ್ದರಿಂದ ಇನ್ನು ಮುಂದೆ 12 ಜನ ನಿರ್ದೇಶಕರಿರುತ್ತಾರೆ .

       ಮುಂದಿನ ಇಪ್ಪತ್ತು ತಿಂಗಳಿನ ನಂತರ ವಿ.ಎಸ.ಎಸ್.ಎನ್ ಸಂಘದ ನಿರ್ದೇಶಕರುಗಳ ಚುನಾವಣೆ ನಡೆಯಲಿದೆ.ಇದೇ ಸಂಧರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಕೆ ಎಂ ರಂಗದಾಮೇಗೌಡ, ತಿಮ್ಮಕ್ಕ, ತಾಯಮ್ಮ, ಜಯರಾಮರೆಡ್ಡಿ, ಹನುಮಂತರೆಡ್ಡಿ, ಕಾಮಣ್ಣ, ತಿಮ್ಮಣ್ಣ, ಉಪಾಧ್ಯಕ್ಷ ವಿಶ್ವನಾಥ್, ಸೂಪರ್ ವೈಸರ್, ತಿಮ್ಮರಾಜು ಹಾಗೂ ರೈತಾಪಿವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link