ಝೀರೋ ಟ್ರಾಫಿಕ್ : ಮಕ್ಕಳ ಬಳಿ ಕ್ಷಮೆ ಯಾಚಿಸಿದ ಡಿಸಿಎಂ ..!!

ಬೆಂಗಳೂರು

      ಶೂನ್ಯ ಸಂಚಾರ(ಝೀರೋ ಟ್ರಾಫಿಕ್)ದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಶುಕ್ರವಾರ ಬೆಳಿಗ್ಗೆ ಸಂಚಾರ ನಡೆಸಿದ್ದರಿಂದ ನಿಗಧಿತ ಸಮಯಕ್ಕೆ ಶಾಲೆಗೆ ವಿದ್ಯಾರ್ಥಿಗಳು ಹೋಗಲು ಶಾಧ್ಯವಾಗದೇ ಪರಿತಪಿಸುವಂತಾಯಿತು.

      ಆರ್.ಟಿ.ನಗರ ಪೊಲೀಸ್ ಠಾಣೆ ಬಳಿ ರಸ್ತೆ ಅಗಲೀಕರಣ ವೀಕ್ಷಣೆ ನಡೆಸಲು ಆಗಮಿಸಿದ್ದ ಪರಮೇಶ್ವರ್ ಕಾರಿನ ಹಿಂದೆ ಬೆಂಬಲಿಗರ ಸಾಲು ಸಾಲು ಕಾರುಗಳಿದ್ದವು. ಇದರಿಂದಾಗಿ ಖಾಸಗಿ ಶಾಲಾ ಬಸ್ಸಿಗೆ ತೊಂದರೆಯಾಗಿದೆ. ಪರಮೇಶ್ವರ್ ಸ್ಥಳಕ್ಕೆ ಬಂದು 20 ನಿಮಿಷ ಆದರೂ ಶಾಲಾ ಮಕ್ಕಳ ಬಸ್ ಸಿಗ್ನಲ್‍ನಲ್ಲೇ ನಿಲ್ಲಿಸಿದ್ದರು. ಕೊನೆಗೆ 20 ನಿಮಿಷಗಳ ನಂತರ ಬಸ್ ಬಿಟ್ಟಿದ್ದಾರೆ. ಇದರಿಂದ ಜನ ಪ್ರತಿನಿಧಿಗಳಿಂದ ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಕ್ಷಮೆ:

    ಶಾಲಾ ಮಕ್ಕಳಿಗೆ ಝೀರೋ ಟ್ರಾಫಿಕ್ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ನಾನು ಶಾಲಾ ಮಕ್ಕಳ ಬಳಿ ಕ್ಷಮೆ ಕೇಳುವೆ. ಜೊತೆಗೆ ಎಲ್ಲರಿಗೂ ಕ್ಷಮೆ ಕೇಳುವೆ. ನಮ್ಮಿಂದ ಯಾರಿಗೆ ಬೇಸರ ಆಗಬಾರದು. ಪೊಲೀಸರಿಗೆ ಅಂಬುಲೆನ್ಸ್, ಶಾಲಾ ವಾಹನಗಳಿಗೆ ಅಡ್ಡಿ ಮಾಡಬೇಡಿ ಎಂದು ಹೇಳಿದ್ದೆ. ಆದರೂ ಈ ರೀತಿ ಕೆಲವೊಮ್ಮೆ ಆಗಿದೆ. ಇದು ನನಗೂ ಬೇಸರ ತಂದಿದೆ. ಮತ್ತೊಮ್ಮೆ ಹೀಗೆ ಆಗಲ್ಲ ಎಂದು ಶಾಲಾ ಮಕ್ಕಳ ಮತ್ತು ಪೋಷಕರ ಬಳಿ ಕ್ಷಮೆ ಕೇಳಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ಮತ ಹಾಕಿದ್ದೀರಿ. ಯಾರಿಗೆ ಮತ ಹಾಕಿದ್ದೀರಿ, ಹಾಕಿಲ್ಲ ಅಂತ ಗೊತ್ತಿಲ್ಲ. ಆದರೆ ಬಿಜೆಪಿಗೆ ಹೆಚ್ಚು ಮತ ಹಾಕಿದ್ದೀರಿ, ಪರವಾಗಿಲ್ಲ. ಜನಸಮುದಾಯಕ್ಕೆ ತೊಂದರೆ ಆಗಬಾರದು ಅಷ್ಟೇ. ಜನರ ಸಂಕಷ್ಟಕ್ಕೆ ಮೈತ್ರಿ ಸರ್ಕಾರ ಸ್ಪಂದಿಸಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link