ಮಾಸ್ಕ್ ದಂಡದ ಪ್ರಮಾಣ ಹೆಚ್ಚಳ ಸಮರ್ಥಿಸಿಕೊಂಡ ಡಿಸಿಎಂ..!

ಬೆಂಗಳೂರು

    ಕೊರೊನಾ ವೈರಸ್ ನಡುವೆಯೇ ಬದುಕಬೇಕಾಗಿರುವುದರಿಂದ ಜನರ ಸುರಕ್ಷಿತೆ ದೃಷ್ಟಿಯಿಂದ ಮಾಸ್ಕ್ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ ತಿಳಿಸಿದ್ದಾರೆ. ಕೊರೊನಾ ಬಹುಕಾಲ ಎದುರಿಸಬೇಕಾದ ರೋಗವಾಗಿದ್ದು, ಇದಕ್ಕೆ ಮಾಸ್ಕ್ ಧರಿಸುವುದು ರಾಮಬಾಣವಾಗಿದೆ ಎಂದರು.ವೈರಾಣು ತಡೆಗೆ ಮಾಸ್ಕ್ ಬಳಕೆ ಮಾಡುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಯಾರೂ ಕೂಡ ಮಾಸ್ಕ್ ತೆಗೆದು ಮಾತನಾಡುವ ಕೆಲಸ ಮಾಡಬಾರದು.

    ನಾನು ಕೂಡ ಸೋಂಕಿತನಾಗಿದ್ದೆ. ನಾನು ಅನುಭವಿಸಿದ್ದು ಮತ್ತ್ಯಾರಿಗೂ ಆಗಬಾರದು ಎಂಬ ಉದ್ದೇಶ. ಎಲ್ಲವೂ ಇದ್ದಾಗಲೂ ನನಗೆ ಎಷ್ಟು ಸಮಸ್ಯೆಯಾಗಿದೆ ಎಂಬುದು ನನಗೇ ಗೊತ್ತಿದೆ. ಈ ವಿಚಾರವನ್ನು ಯಾರೂ ಹಗರುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು .ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲವಿಲ್ಲ. ಪಕ್ಷದಿಂದ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಪಕ್ಷದ ಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ತೀರ್ಮಾನವಾಗಲಿದ್ದು, ಈ ಬಗ್ಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ ಪಕ್ಷದ ಮಟ್ಟದಲ್ಲಿ ಚರ್ಚೆಯಾಗಿ ಒಮ್ಮತದ ನಿರ್ಧಾರ ಮಾಡಿ ಒಮ್ಮತದ ಆಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link